Will Smith: ವಿಲ್ ಸ್ಮಿತ್ ಮನೆಗೆ ಪೊಲೀಸರು..!!
ಹಾಲಿವುಡ್ ಸ್ಟಾರ್ ಹೀರೋ, ಆಸ್ಕರ್ ಪುರಸ್ಕೃತ ವಿಲ್ ಸ್ಮಿತ್ ಆಸ್ಕರ್ 2022 ವೇದಿಕೆಯಲ್ಲಿ ಮಾಡಿದ ಕೆಲಸ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ.
ಅಮೇರಿಕನ್ ಹಾಸ್ಯನಟ ಕ್ರಿಸ್ ರಾಕ್ ಮೇಲೆ ವಿಲ್ ಕೈ ಮಾಡಿದ್ದರು.
ಅಮೇರಿಕನ್ ಹಾಸ್ಯನಟ ಕ್ರಿಸ್ ರಾಕ್ ಅವರು ಆಸ್ಕರ್ 2022 ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಪ್ರಶಸ್ತಿಯನ್ನು ನೀಡಲು ವೇದಿಕೆಗೆ ಬಂದಿದ್ದರು.
ಆಗ ಎನೋ ಮಾತನಾಡುತ್ತಾ ಕ್ರಿಸ್, ಅನಾರೋಗ್ಯದಿಂದ ತಲೆಬೋಳಿಸಿಕೊಂಡ ವಿಲ್ ಸ್ಮಿತ್ ಪತ್ನಿ ನಟಿ ಜಾಡಾ ಪಿಂಕೆಟ್ ಅವರ ಬಗ್ಗೆ ತಮಾಷೆ ಮಾಡಿದ್ರು.
ಇದರಿಂದ ಅಲ್ಲಿಯವರೆಗೂ ನಗುತ್ತಲೇ ಇದ್ದ ವಿಲ್ ಸ್ಮಿತ್ ಸಿಟ್ಟಿನಿಂದ ಕ್ರಿಸ್ ರಾಕ್ ಗೆ ಕಪಾಳ ಮೋಕ್ಷ ಮಾಡಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದರ ಬೆನ್ನಲ್ಲೆ ಲಾಸ್ ಏಂಜಲೀಸ್ ಪೊಲೀಸರು ವಿಲ್ ಸ್ಮಿತ್ ಮನೆಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಲ್ ಅವರ ಮನೆಯ ಆವರಣದಲ್ಲಿ ಡ್ರೋನ್ ಪತ್ತೆಯಾದ ಬಗ್ಗೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದರಂತೆ.
ಅದಕ್ಕಾಗಿಯೇ ಪೊಲೀಸರು ವಿಲ್ ಸ್ಮಿತ್ ಕ್ಯಾಲಬಸನ್ ಮ್ಯಾನ್ಷನ್ ಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.
ಆದರೆ, ವಿಲ್ ಅವರ ಮನೆಯ ಆವರಣದಲ್ಲಿ ಎಲ್ಲಿಯೂ ಡ್ರೋನ್‌ಗಳು ಪೊಲೀಸರಿಗೆ ಕಾಣಿಸಿಲ್ಲ.
ಡ್ರೋನ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಯಾರು ಎಂದೂ ಕೂಡ ಸ್ಪಷ್ಟವಾಗಿಲ್ಲ. loss-angeles-police-visits-will-smith-home