ಹಿಂದು ಯುವತಿ ಅಪಹರಣ.. ಬಲವಂತದ ಮತಾಂತರ… ಆರೋಪಿ ಅಂದರ್..!
ಬಿಜ್ನೋರ್: ಲವ್ ಜಿಹಾದ್ ಪ್ರಕರಣಗಳು ಹೆಚಚ್ಚುತ್ತಲೇ ಇರೋ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರದಲ್ಲಿ ಮತಾಂತರ ನಿಗ್ರಹ ಕಾಯ್ದೆ ಜಾರಿಯಾಗಿದೆ. ಇದೀಗ ಬಲವಂತದ ಮತಾಂತರ ಮಾಡುತ್ತಿರೋರಿಗೆ ಭಜರಂಗದಳ ಸದಸ್ಯರು ಚಳಿ ಬಿಡಿಸುತ್ತಿದ್ದಾರೆ. ಇಂತಹದ್ದೇ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಯುವತಿಯೊಬ್ಬಳನ್ನು ಅಪಹರಿಸಿ, ಬಲವಂತವಾಗಿ ಮತಾಂತರ ಮಾಡಿದ ಹಿನ್ನೆಲೆಯಲ್ಲಿ ಮತಾಂತರ ನಿಗ್ರಹ ಕಾಯ್ದೆಯಡಿ ವ್ಯಕ್ತಿಯೊಬ್ಬನನ್ನು ಬಿಜ್ನೋರ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಸಾಖಿಬ್ ಎಂಬಾತ ಯುವತಿಯನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆ ಆತನನ್ನ ಬಂಧಿಸಲಾಗಿದೆ. ಇನ್ನೂ ಕಳೆದ ಕೆಲವು ದಿನಗಳಿಂದ ಧಾಂಪುರ್ ನಿವಾಸಿ ಯುವತಿ ನಾಪತ್ತೆಯಾಗಿದ್ದಳು ಎಂದು ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಯುವತಿ ಹಾಗೂ ಆರೋಪಿಯನ್ನು ಪತ್ತೆಹಚ್ಚಿದ್ದರು. ವಿಚಾರಣೆಯಲ್ಲಿ ಆರೋಪಿ ಯುವತಿಯನ್ನು ಅಪಹರಿಸಿ, ಬಲವಂತವಾಗಿ ಮತಾಂತರ ಮಾಡಿರುವ ಬಗ್ಗೆ ತಿಳಿದುಬಂದಿದೆ.
ಮದಗಜ ಟೀಸರ್.. ಅದ್ಭುತಃ.. ಅದ್ಭುತಸ್ಯ.. ಅದ್ಭುತೋಭ್ಯಃ..!!
ಇನ್ನೂ ಸಾಖಿಬ್ ತನ್ನ ನಿಜವಾದ ಗುರುತನ್ನು ಮರೆಮಾಚಿ, ತನ್ನನ್ನು ಸೋನು ಎಂಬ ಹೆಸರಿನಲ್ಲಿ ಯುವತಿ ಬಳಿ ಪರಿಚಯಿಸಿಕೊಂಡಿದ್ದ. ನಂತರ ಆಕೆಯನ್ನು ಅಪಹರಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಕಾನೂನು ಬಾಹಿರ ಧಾರ್ಮಿಕ ಮತಾಂತರ ಕಾಯ್ದೆಯಡಿ ದೂರು ದಾಖಲಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಪೊಲೀಸರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel