ಲವ್ ಜಿಹಾದ್ – ಮಾವನೊಂದಿಗೆ ಸೆಕ್ಸ್ ಗೆ ಒತ್ತಡ ಹೇರಿದ ಗಂಡ , ಅತ್ತೆ – ಒಪ್ಪದಕ್ಕೆ ವೇಶ್ಯಾವಾಟಿಕೆಗೆ ದೂಡಲು ಯತ್ನ
ಜಮ್ಮು ಕಾಶ್ಮೀರ : ಲವ್ ಜಿಹಾದ್ ಗೆ ಸಿಲುಕಿ ಅನ್ಯ ಧರ್ಮೀಯನನ್ನ ಮದುವೆಯಾಗಿದ್ದ ಯುವತಿಗೆ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.. ಯುವತಿಯು ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆದಿದ್ದಾಳೆ.
ಜಲಂಧರ್ ಆಸ್ಪತ್ರೆಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಯುವತಿ ಉದ್ಯೋಗಿಯಾಗಿದ್ದ ಸಂದರ್ಭದಲ್ಲಿ, ಯುವಕನನ್ನು ಪ್ರೀತಿಸಿದ್ದಳು. ಆಕೆಯ ಶಾಲಾ ದಿನಗಳಿಂದಲೂ ಸಹಪಾಠಿಯಾಗಿದ್ದ ಯುವಕ ಮದುವೆಯ ಸಂದರ್ಭದಲ್ಲಿ ಮತಾಂತರದ ಷರತ್ತು ಹಾಕಿರಲಿಲ್ಲ. ಆತನ ಕುಟುಂಬದವರು ಕೂಡ ಮತಾಂತರವಾಗಲು ಹೇಳಿರಲಿಲ್ಲ. ಆದರೆ, ಮದುವೆಯಾಗಿ ಮನೆಗೆ ಹೋದ ನಂತರ ಗಂಡ ಮತ್ತು ಆತನ ಮನೆಯವರ ಅಸಲಿ ಬಣ್ಣ ಬಯಲಾಗಿದೆ.
ಉತ್ತರಪ್ರದೇಶದ ಮಸೀದಿಯಲ್ಲಿ ಮದುವೆಯಾದ ಸಂದರ್ಭದಲ್ಲಿ ಯುವತಿಯ ಹೆಸರನ್ನು ಬದಲಾಯಿಸಲಾಗಿದೆ. ಮದುವೆಯಾಗಿದ್ದ ಯುವಕನಿಗೆ ಈ ಮೊದಲೇ ಮದುವೆಯಾಗಿರುವುದು ಕೂಡ ಗೊತ್ತಾಗಿದೆ.
ಇನ್ನೂ ಆಘಾತಕಾರಿ ಸಂಗತಿಯಂದೆ ಆಕೆಯ ಪತಿಯ ತಾಯಿ (ಅತ್ತೆ ) ಕ್ಯಾನ್ಸರ್ ಪೀಡಿತೆಯಾಗಿದ್ದು, ತನ್ನ ಪತಿಯ (ಮಾವ) ಜೊತೆಗೆ ಸೆಕ್ಸ್ ಗೆ ಒಪ್ಪುವಂತೆ ಒತ್ತಡ ಹೇರಿದ್ದಾಳೆ.. ಇದಕ್ಕೆ ಆಕೆಯ ಗಂಡನು ಕೂಡ ಸಾಥ್ ನೀಡಿದ್ದಾನೆ.
ಯುವತಿ ಇದಕ್ಕೆಲ್ಲ ಒಪ್ಪದಿದ್ದಾಗ ಆಸ್ತಿ, ಹಣ ಕೊಡುವ ಆಮಿಷವೊಡ್ಡಿದ್ದಾರೆ.. ಆದ್ರೆ ಇದ್ಯಾವುದಕ್ಕೂ ಒಪ್ಪದ ಯುವತಿಯನ್ನ ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದಾಗಿ ನೊಂದ ಯುವತಿ ಪತ್ರದಲ್ಲಿ ದೂರಿದ್ದಾಳೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.