ಮ್ಯಾಚ್ ಮಧ್ಯೆ ಆಸ್ಟ್ರೇಲಿಯಾ ಹುಡುಗಿಗೆ ಪ್ರಪೋಸ್
ಸಿಡ್ನಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಭಾರತ 51 ರನ್ ನಿಂದ ಸೋಲನುಭವಿಸಿದೆ.
ಆಸ್ಟ್ರೇಲಿಯಾದ ನೀಡಿದ 390 ಬೃಹತ್ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 338 ರನ್ ಗಳಿಸಲಷ್ಟೆ ಶಕ್ತವಾಯಿತು. ಆ ಮೂಲಕ ಮೂರು ಮ್ಯಾಚ್ ಗಳ ಸರಣಿಯನ್ನು ಭಾರತ ಸೋತಿದೆ. 2ನೇ ಏಕದಿನ ಪಂದ್ಯ ಸೋತ ಟೀಂ ಇಂಡಿಯಾ : ಸರಣಿ ಗೆದ್ದ ಆಸೀಸ್
ಆದ್ರೆ ಪಂದ್ಯದ ಮಧ್ಯೆ ಮತ್ತೊಂದು ವಿಚಾರ ಗಮನ ಸೆಳೆದಿದ್ದು, ಇದೀಗ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಭಾರತ ಕ್ರಿಕೆಟ್ ತಂಡದ ಅಭಿಮಾನಿಯೊಬ್ಬ ಆಸ್ಟ್ರೇಲಿಯಾ ಯುವತಿಗೆ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದಾನೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://twitter.com/i/status/1332983694890389510
ಕ್ರೀಡಾಂಗಣದಲ್ಲಿ ಪಂದ್ಯ ನೋಡಲು ಅಪಾರ ಪ್ರಮಾಣದಲ್ಲಿ ಜನ ಸೇರಿದ್ದು, ಇದರ ಮಧ್ಯೆ ಯುವಕ ಪ್ರಪೋಸ್ ಮಾಡಿದ್ದಾನೆ.
ಮೊಣಕಾಲೂರಿ ಯುವತಿಗೆ ಪ್ರೇಮನಿವೇದನೆ ಮಾಡಿಕೊಂಡಿದ್ದಾನೆ. ಇನ್ನೂ ಆಶ್ಚರ್ಯವೆಂಬಂತೆ ಯುವತಿ ಈತನ ಪ್ರೇಮನಿವೇದನೆಯನ್ನು ಒಪ್ಪಿಕೊಂಡಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









