ಪ್ರೇಯಸಿಯನ್ನ ಇಂಪ್ರೆಸ್ ಮಾಡಲು ರೋಸ್ ಬದಲು ಗನ್ ಕೊಟ್ಟು ಅರೆಸ್ಟ್ ಆದ ಯುವಕ
ನಾಗಲ್ಯಾಂಡ್ : ಯುವಕ ಯುವತಿಯರು ಪ್ರೇಮ ನಿವೇದನೆ ಮಾಡಲು ನಾನಾ ರೀತಿಯ , ವಿಭಿನ್ನ ಉಪಾಯಗಳನ್ನ ಮಾಡುತ್ತಾ ಸರ್ಪ್ರೈಸ್ ಕೊಡ್ತಾರೆ.. ಆದ್ರೆ ಇಲ್ಲೊಬ್ಬ ಯುವಕ ತನ್ನ ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ರೋಸ್ ನೀಡುವ ಬದಲು ಬಂದೂಕು ನೀಡಿ ಇದೀಗ ಜೈಲು ಸೇರಿದ್ದಾನೆ.
ಹೌದು ನಾಗಲ್ಯಾಂಡ್‍ನ ಪದುಂಪುಖುರಿ ಪ್ರದೇಶದ ದಿಮಾಪುರ್ ನಲ್ಲಿ ಇಂತಹದೊಂದು ಘಟನೆ ನಡೆದಿದೆ. 25 ವರ್ಷದ ಯುವಕ ಟೋರಿನ್ ತಿಖಿರ್ ಎಂಬಾತ 22 ಕ್ಯಾಲಿಬರ್ ಪಿಸ್ತೂಲ್ ಅನ್ನ ಬಾಡಿಗೆಗೆ ಪಡೆದು ಪ್ರೇಯಸಿಯನ್ನ ಇಂಪ್ರೆಸ್ ಮಾಡಲು ಹೋಗಿದ್ದಾನೆ.
ಈ ವಿಷಯ ತಿಳಿಯುತ್ತಿದ್ದಂತೆ ದಿಮಾಪುರ್ ಪೊಲೀಸರು ಯುವಕನನ್ನು ಬಂಧಿಸಿದ್ದು, ಪಿಸ್ತೂಲ್ ಹಾಗೂ 3 ಸುತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಿಮಾಪುರ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ದಿಮಾಪುರ್ ಪೊಲೀಸರು, ಯುವಕ ತನ್ನ ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ರೋಸ್ ಕೊಡುವ ಬದಲಿಗೆ ಗನ್ ನೀಡಿದ್ದಾನೆ. ಆದರೆ ಪ್ರಿಯತಮೆ ಅಷ್ಟೇನು ಇಂಪ್ರೆಸ್ ಆಗಿಲ್ಲ. .22 ಕ್ಯಾಲಿಬರ್ ಪಿಸ್ತೂಲ್‍ನ್ನು ಅಕ್ರಮವಾಗಿ ಹೊಂದಿದ್ದಕ್ಕೆ ಪದಂಪುಖುರಿ ಪ್ರದೇಶದಿಂದ ಒಬ್ಬನನ್ನು ಬಂಧಿಸಲಾಗಿದೆ. ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹುಡುಗರೊಂದಿಗೆ ಚಾಟ್ ಮಾಡಿದ್ದಕ್ಕೆ ಹೆಣ್ಣು ಮಕ್ಕಳ ಜುಟ್ಟು ಹಿಡಿದು ಎಳೆದಾಡಿ ಅಮಾನವೀಯವಾಗಿ ಥಳಿಸಿದ ಕುಟುಂಬ..! – VIRAL VIDEO
96,700 ರೂ. ಬೆಲೆಯ ಎಸಿಯನ್ನ 5,900 ರೂ.ಗೆ ಮಾರಿದ ಅಮೆಜಾನ್
ಚೀನಾದ ಪರ ಸುದ್ದಿ ಬಿತ್ತರಿಸಲು ಅಮೆರಿಕದ ಮಾಧ್ಯಮಗಳಿಗೆ ಲಕ್ಷಾಂತರ ಡಾಲರ್ ಸುರಿದ ಚೀನಾ