96,700 ರೂ. ಬೆಲೆಯ ಎಸಿಯನ್ನ 5,900 ರೂ.ಗೆ ಮಾರಿದ ಅಮೆಜಾನ್
ಬೆಂಗಳೂರು: ಇ ಕಾಮರ್ಸ್ ನ ದೈತ್ಯ ಅಮೆಜಾನ್ ಒಂದಲ್ಲಾ ಒಂದು ಎಡವಟ್ಟುಗಳನ್ನ ಮಾಡುತ್ತಲೇ ಇರುತ್ತೆ.. ಫೋನ್ ಬದಲಾಗಿ ಸೋಪ್ , ಇಲ್ಲ ಯಾವುದೋ ವಸ್ತು ಆರ್ಡರ್ ಮಾಡಿದ್ರೆ ಮತ್ಯಾವುದೋ ವಸ್ತುವನ್ನ ಡಿಲೆವರ್ ಮಾಡೋದು, ಇಲ್ಲ ತಪ್ಪಾದ ಅಡ್ರೆಸ್ ಡಿಲೆವರ್ ಮಾಡಿ ಸುದ್ದಿಯಲ್ಲೇ ಇರುತ್ತೆ.. ಆದ್ರೆ ಈ ಬಾರಿ ಶೇ 94 ಡಿಸ್ಕೌಂಟ್ ಸಹಿತ ಆಫರ್ ದರದಲ್ಲಿ 96,700 ರೂ. ಬೆಲೆಯ ಎಸಿಯನ್ನ 5,900 ರೂ.ಗೆ ಮಾರಾಟ ಮಾಡಿದೆ. ಹೌದು.. ಅಮೆಜಾನ್‌ನಲ್ಲಿ ತೋಷಿಬಾ ಕಂಪನಿಯ 96,700 ರೂಪಾಯಿಯ ಎಸಿಯನ್ನ ಶೇ 94 ಡಿಸ್ಕೌಂಟ್ ಸಹಿತ ಕೇವಲ 5,900 ರೂಪಾಯಿಗೆ ಲಭ್ಯವಾಗಿದೆ..
ಹೌದು.. ಅಮೆಜಾನ್ ಆಫರ್ ಸೇಲ್‌ನಲ್ಲಿ ಉಂಟಾದ ಎಡವಟ್ಟಿನಿಂದ ಗ್ರಾಹಕರಿಗೆ ದುಬಾರಿ ಬೆಲೆಯ ಎಸಿ, ಅತಿ ಕಡಿಮೆ ಬೆಲೆಗೆ ದೊರೆತಿದೆ. ಅಲ್ಲದೆ, ಕೇವಲ 278 ರೂಪಾಯಿಗೆ ಇಎಂಐ ಆಯ್ಕೆ ಕೂಡ ಲಭ್ಯವಾಗಿದೆ. ಅಮೆಜಾನ್ ಕಂಪನಿಗೆ ಎಡವಟ್ಟು ಗಮನಕ್ಕೆ ಬರುತ್ತಲೇ ಅದನ್ನು ತಕ್ಷಣವೇ ಸರಿಪಡಿಸಿದೆ. ಅಲ್ಲದೆ, ಹೊಸ ದರದಲ್ಲಿ ತೋಷಿಬಾ ಎಸಿ ಈಗ ಗ್ರಾಹಕರಿಗೆ ಲಭ್ಯವಾಗುತ್ತಿದೆ. ತೋಷಿಬಾ 1.8 ಟನ್ 5 ಸ್ಟಾರ್ ಇನ್ ವರ್ಟರ್ ಸಹಿತ ಎಸಿ, ಮೂಲ ಬೆಲೆಯಲ್ಲಿ ಶೇ 20 ಡಿಸ್ಕೌಂಟ್ ಬಳಿಕ, 59,490ರೂಗೆ ದೊರೆಯುತ್ತಿದೆ.
ಅಮೆಜಾನ್ ಸಿಇಒ ಹುದ್ದೆ ಬಿಟ್ಟು ತೆರಳಿದ ಜೆಫ್ ಬೆಜೋಸ್