Love You Rachchu Film Honest Review | ಅಜಯ್ ಮುಗ್ಧ ಪ್ರೀತಿಯ ಕ್ರೈಂ ಕಥೆ..
ಚಿತ್ರ : ಲವ್ ಯು ರಚ್ಚು
ನಿರ್ದೇಶಕ : ಶಂಕರ್ ರಾಜ್
ತಾರೆಯರು : ಅಜಯ್ ರಾವ್, ರಚಿತಾ ರಾಮ್, ಅಚ್ಚುತ್ ಕುಮಾರ್
ನಿರ್ಮಾಣ : ಗುರು ದೇಶಪಾಂಡೆ
ಲವ್ ಯು ರಚ್ಚು ಟೈಟಲ್ ಮತ್ತು ವಿವಾದದಿಂದ ಸದ್ದು ಮಾಡಿರುವ ಸಿನಿಮಾ. ಒಂದಿಷ್ಟು ಗೊಂದಲ ಒಂದಿಷ್ಟು ವಿವಾದದ ಮಧ್ಯೆ ಲವ್ ಯು ರಚ್ಚು ಸಿನಿಮಾ ಸೆಲೆಬ್ರಿಟಿ ಶೋ ಮುಗಿದಿದೆ. ನಿರ್ದೇಶಕ ಶಂಕರ್ ರಾಜ್ ಹೇಳಿದಂತೆ ಹಾಗೇ ಟ್ರೈಲರ್ ನಲ್ಲಿ ತೋರಿಸಿದಂತೆ ಇದೊಂದು ರೊಮ್ಯಾಂಟಿಕ್ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡಿದೆ.
ಕಥೆ
ಹೆಂಡತಿಯನ್ನ ರಾಣಿಯಂತೆ ನೋಡಿಕೊಳ್ಳುವ ಅಜಯ್, ಹೆಂಡತಿ ರಚ್ಚು ಬರ್ತ್ ಡೇಗೆ ಗಿಫ್ಟ್ ತಗೊಂಡು ಮುಂಬೈ ನಿಂದ ಬರ್ತಾರೆ. ಮನೆಗೆ ಬಂದ ಅಜಯ್ ಗೆ ಡ್ರೈವರ್ ಮೃತದೇಹ ಮುಂದೆ ಮುಖದ ಮೇಲೆ ರಕ್ತ ಚೆಲ್ಲಿಕೊಂಡು ಅಳುತ್ತಿರುವ ಹೆಂಡತಿ ಕಾಣಿಸ್ತಾಳೆ. ಆ ಕೊಲೆಯನ್ನ ಮಾಡಿದ್ದು ಯಾರು..? ಆ ಮೃತದೇಹವನ್ನು ಅಜಯ್ ಹೇಗೆ ಮಾಯ ಮಾಡ್ತಾರೆ..? ಮೃತ ದೇಹವನ್ನ ಸಾಗಿಸುವ ಹಂತದಲ್ಲಿ ಅಜಯ್ ಗೆ ಬ್ಲಾಕ್ ಮೇಲ್ ಮಾಡುವ ವ್ಯಕ್ತಿ ಯಾರು..? ಹೀಗೆ ಮೃತದೇಹದ ಸುತ್ತ ಕಥೆ ಸುತ್ತುತ್ತದೆ. ಕೊನೆಯಲ್ಲಿ ಎಲ್ಲವನ್ನೂ ಉಲ್ಟಾ ಮಾಡುವ ಟ್ವಿಸ್ಟ್ ಕೂಡ ಚಿತ್ರದಲ್ಲಿದೆ.
ವಿಮರ್ಷೆ
ಮೊದಲನೇಯದಾಗಿ ಚಿತ್ರದ ಟೈಟಲ್ ಗೆ ತಕ್ಕಂತೆ ಸಿನಿಮಾ ಇದೆ. ಸಿನಿಮಾದ ಕಥೆಯಲ್ಲಿ ಹೊಸತನ ಇಲ್ಲದಿದ್ದರೂ ಫೈಟ್ಸ್, ಸಾಂಗ್ಸ್, ರೋಮ್ಯಾನ್ಸ್, ಅಲ್ಲಲ್ಲಿ ಕಾಮಿಡಿ ಮೂಲಕ ಕಥೆಯನ್ನ ಎರಡು ಕಾಲು ಗಂಟೆ ಎಳೆದಿದ್ದಾರೆ. ಆದರೇ ಚಿತ್ರದ ಕೊನೆಯ 30 ನಿಮಿಷ ಒಂದಿಷ್ಟು ಕುತೂಹಲ ಹುಟ್ಟಿಸುತ್ತದೆ. ಹಾಗೇ ಕ್ಲೈಮ್ಯಾಕ್ಸ್ ಎಲ್ಲರನ್ನೂ ಕಾಡುತ್ತೆ. ಕೆಲವರಿಗೆ ಇಷ್ಟ ಆಗಬಹುದು.. ಇನ್ನೂ ಕೆಲವರಿಗೆ ಇಷ್ಟವಾಗದೇ ಇರಬಹುದು. ಸಿನಿಮಾದಲ್ಲಿ ಹಿನ್ನಲೆ ಸಂಗೀತ, ಹಾಡುಗಳು ಚೆನ್ನಾಗಿವೆ. ಕ್ಯಾಮೆರಾ ವರ್ಕ್ ಅಲ್ಲಿಲ್ಲ ಚೆನ್ನಾಗಿದೆ. ನಿರ್ದೇಶಕ ಶಂಕರ್ ರಾಜ್ ರಿಸ್ಕ್ ತೆಗೆದುಕೊಳ್ಳದೇ ಸಿನಿಮಾ ಮಾಡಿ ಮುಗಿಸಿದ್ದಾರೆ.
ಇನ್ನು ನಾಯಕಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿರುವ ನಾಯಕನ ಪಾತ್ರದಲ್ಲಿ ಅಜಯ್ ರಾವ್ ಉತ್ತಮವಾಗಿ ನಟಿಸಿದ್ದಾರೆ. ಅವರನ್ನ ಬಿಟ್ಟರೇ ಗ್ಲಾಮರ್ ಡಾಲ್ ರಚಿತಾ ರಾಮ್ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಅಲ್ಲಲ್ಲಿ ಒಂದಿಷ್ಟು ಪಾತ್ರಗಳು ಬಂದರೂ ಯಾವುದೂ ನನೆಪಿನಲ್ಲಿ ಉಳಿದುಕೊಳ್ಳಲ್ಲ.
ಒಟ್ಟಾರೆ ಲವ್ ಯು ರಚ್ಚು ಸಿನಿಮಾದಲ್ಲಿ ಹೊಸತನವೇನು ಇಲ್ಲದಿದ್ದರೂ ಅಜ್ಜು – ರಚ್ಚು ಪ್ರೀತಿಯ ಜೊತೆ ಅಜಯ್ ರಾವ್ ಫೈಟ್ಸ್ ಎಂಜಾಯ್ ಮಾಡುತ್ತಾ, ಮೃತ ದೇಹ ಏನಾಗುತ್ತೆ..? ಕೊಲೆ ಮಾಡಿದ್ದು ಯಾರು.. ಯಾಕೆ ಅನ್ನೋ ಕುತೂಹಲವನ್ನ ಉಳಿಸಿಕೊಂಡು ಸಿನಿಮಾವನ್ನ ನೋಡಬಹುದು.