ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಖಾಪ್ ಪಂಚಾಯತ್ ನಾಚಿಕೆಗೇಡಿನ ಇಡೀ ಮನುಕುಲವೇ ತಲೆ ತಗ್ಗಿಸುವ ಘಟನೆಗೆ ಸಾಕ್ಷಿಯಾಗಿದೆ. ಖಾಪ್ ಪಂಚಾಯತ್ ಆದೇಶದ ಮೇರೆಗೆ ಗ್ರಾಮದ ಹೆಣ್ಣು ಮಗಳು ಮತ್ತು ಆಕೆಯ ಸೋದರಳಿಯರು ಅಮಾನವೀಯತೆಗೆ ಒಳಗಾಗಬೇಕಾಯಿತು. ಆಕೆಯನ್ನು ಸುಮಾರು 400 ಜನರ ಸಮ್ಮುಖದಲ್ಲಿ ಬಟ್ಟೆಗಳನ್ನು ತೆಗೆದು ಸ್ನಾನ ಮಾಡಲಾಯಿತು. ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ, 11 ದಿನಗಳ ನಂತರ ಆಲ್ ರಾಜಸ್ಥಾನ ಸಾನ್ಸಿ ಸಾಮಾಜಿಕ ಸುಧಾರಣಾ ಮತ್ತು ಅಭಿವೃದ್ಧಿ ಟ್ರಸ್ಟ್‌ನ ರಾಜ್ಯ ಅಧ್ಯಕ್ಷ ಸವಾಯಿ ಸಿಂಗ್ ಮಲಾವತ್ ಅವರು ಸಿಕಾರ್‌ನ ಎಎಸ್‌ಪಿಗೆ ಲಿಖಿತ ದೂರು ನೀಡಿದ ನಂತರ ಪೊಲೀಸರು 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸ್ವಲ್ಪ ಸಮಯದ ಹಿಂದೆ, ಸಿಕಾರ್ ಜಿಲ್ಲೆಯ ನೆಚಾವಾ ಗ್ರಾಮ ಪಂಚಾಯಿತಿಯ ಸೋಲಾ ಗ್ರಾಮದಲ್ಲಿ ಸಂಸಿ ಸಮಾಜದ ಹೆಣ್ಣು ಮಗಳ ಜೊತೆ ಸಂಬಂಧ ಹೊಂದಿದ್ದ ಯುವಕನ ವಿಡಿಯೋ ವೈರಲ್ ಆಗಿತ್ತು ಆದರೆ , ಖಾಪ್ ಪಂಚಾಯತ್ ಜನರನ್ನು ಒಟ್ಟುಗೂಡಿಸಿ ಶುದ್ಧೀಕರಣದ ಹೆಸರಿನಲ್ಲಿ, ಯುವತಿಯನ್ನು ಬಟ್ಟೆ ಇಲ್ಲದೆ ಎಲ್ಲರ ಮುಂದೆ ಸ್ನಾನ ಮಾಡಲು ಆದೇಶಿಸಿದರು. ಖಾಪ್ ಪಂಚಾಯತ್ ಎರಡು ಕುಟುಂಬಗಳಿಗೆ ಶಿಕ್ಷೆ ಮತ್ತು ದಂಡ ವಾಗಿ ಯುವಕನಿಂದ 31 ಸಾವಿರ ರೂಪಾಯಿ ಮತ್ತು ಹುಡುಗಿಯ ಕುಟುಂಬದಿಂದ 22 ಸಾವಿರ ರೂಪಾಯಿಗಳನ್ನು ವಿಧಿಸಿತ್ತು.
ಆಗಸ್ಟ್ 21 ರಂದು ಗ್ರಾಮದಲ್ಲಿ ನಡೆದ ಈ ಖಾಪ್ ಪಂಚಾಯಿತಿಯಲ್ಲಿ ಸಿಕಾರ್, ಚುರು, ಝುನ್ಜಹುನುಂ ಮತ್ತು ಬಿಕಾನೇರ್ ಮುಂತಾದ ಕಡೆಯಿಂದ ಪಂಚರು ಸೇರಿದ್ದು ಒಬ್ಬ ಪಂಚ್ ನಿವೃತ ಸರ್ಕಾರಿ ನೌಕರ ಎಂದು ತಿಳಿದು ಬಂದಿದೆ.
ತನಿಖೆ ನಡೆಸುತ್ತಿದ್ದು ,ಸಂತ್ರಸ್ತರ ಕುಟುಂಬದ ಒಪ್ಪಿಗೆಯೊಂದಿಗೆ ಯುವಕ ಮತ್ತು ಯುವತಿಯನ್ನು ಸ್ನಾನ ಮಾಡಿಸಲಾಗಿದೆ ಎಂದು ಸಿಕಾರ್ ಎಎಸ್ಪಿ ವೈದ್ಯ ದೇವೇಂದ್ರ ಶರ್ಮಾ ಹೇಳಿದರು.








