ಓಡಿಹೋಗುತ್ತಿದ್ದ ಪ್ರೇಮಿಗಳು 3 ವರ್ಷದ ಹೆಣ್ಣುಮಗುವನ್ನ ಕಿಡ್ನಾಪ್ ಮಾಡಿದ್ದೇಕು..?

1 min read

ಓಡಿಹೋಗುತ್ತಿದ್ದ ಪ್ರೇಮಿಗಳು 3 ವರ್ಷದ ಹೆಣ್ಣುಮಗುವನ್ನ ಕಿಡ್ನಾಪ್ ಮಾಡಿದ್ದೇಕು..?

ಉತ್ತರ ಪ್ರದೇಶ : ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿಹೋಗಿದ್ದು, ಈ ವೇಳೆ ಯುವತಿ ತನ್ನ ಮನೆಯ 3 ವರ್ಷದ ಮಗುವನ್ನ ತನ್ನೊಂದಿಗೆ ಕರೆದೊಯ್ದಿದ್ದಾಳೆ. ಇದೀಗ ಇಬ್ಬರು ಪ್ರೇಮಿಗಳನ್ನ ಪೊಲೀಸರು ಪಂಜಾಬ್ ನಲ್ಲಿ ಅರೆಸ್ಟ್ ಮಾಡಿದ್ದಾರೆ.

ಉತ್ತರಪ್ರದೇಶದ ಫತ್ತೆಪುರ ನಿವಾಸಿಯಾಗಿದ್ದ 20 ವರ್ಷದ ನಿಶು ದ್ವಿವೇದಿ ತನ್ನ ಬಾಯ್ ಫ್ರೆಂಡ್ (25)ನವದೀಪ್ ಸಿಂಗ್ ಜೊತೆಗೆ ಪರಾರಿಯಾಗಿದ್ದಾಳೆ. ಓಡಿಹೋಗುವ ಮುನ್ನ ತಮ್ಮ ಮನೆಯ 3 ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು ಹೋಗಿದ್ದರು. ಇದರಿಂದ ಗಾಬರಿಗೊಂಡಿದ್ದ ಆಕೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಮಗು ಅಪಹರಣದ ದೂರು ದಾಖಲಿಸಿದ್ದರು.

ವೇಶ್ಯಾವಾಟಿಕೆ ದಂಧೆಯಿಂದ ತಪ್ಪಿಸಿಕೊಂಡ ಮಹಿಳೆಯ ಪಾಲಿಗೆ ದೇವರಾದ ಗ್ರಾಹಕ..!

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಪಂಜಾಬ್ ನಲ್ಲಿ ಈ ಇಬ್ಬರನ್ನೂ ಬಂಧಿಸಿ, ಮಗುವನ್ನು ವಶಕ್ಕೆ ಪಡೆದಿದ್ದಾರೆ. ಆದ್ರೆ ವಿಚಾರಣೆ ನಡೆಸಿದಾಗ ಮಗುವಿನ ಕಿಡ್ನಾಪ್ ಮಾಡಿದ ಬಗ್ಗೆ ಇಬ್ಬರು ನೀಡಿದ ಉತ್ತರಕ್ಕೆ ಪೊಲೀಸರು ದಂಗಾಗಿದ್ದಾರೆ. ಹೌದು ಯಾವುದೇ ಹಾನಿ ಮಾಡುವ ಬ್ಲಾಕ್ ಮೇಲ್ ಮಾಡುವ ಮಾರಾಟ  ಮಾಡುವ ಉದ್ದೇಶದಿಂದ ಮಗುವಿನ ಕಿಡ್ನಾಪ್ ನಡೆದಿದೆ ಎಂಬುದು ಪೊಲೀಸರ ಲೆಕ್ಕಾಚಾರವಾಗಿತ್ತು. ಆದ್ರೆ ಅಸಲಿಗೆ ಯುವತಿ ನೀಡಿದ ಕಾರಣ ಏನೆಂದ್ರೆ ಲಾಡ್ಜ್ ಗಳಲ್ಲಿ ದಂಪತಿಗಳಿಗೆ ಮಾತ್ರ ರೂಂ ಕೊಡುತ್ತಾರೆ. ನಾವಿಬ್ಬರೆ ಹೋದರೆ ರೂಂ ಸಿಗುವುದಿಲ್ಲ ಅಂತಾ ಗೊತ್ತಿತ್ತು. ಹೀಗಾಗಿ ಮಗುವನ್ನು ಕರೆದುಕೊಂಡು ಹೋಗಿದ್ದೇವು ಎಂದಿದ್ದಾಳೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd