ವೇಶ್ಯಾವಾಟಿಕೆ ದಂಧೆಯಿಂದ ತಪ್ಪಿಸಿಕೊಂಡ ಮಹಿಳೆಯ ಪಾಲಿಗೆ ದೇವರಾದ ಗ್ರಾಹಕ..!

1 min read

ವೇಶ್ಯಾವಾಟಿಕೆ ದಂಧೆಯಿಂದ ತಪ್ಪಿಸಿಕೊಂಡ ಮಹಿಳೆಯ ಪಾಲಿಗೆ ದೇವರಾದ ಗ್ರಾಹಕ..!

ಪುಣೆ: ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದ ವಿಧವೆ ಮಹಿಳೆಯು ಇದೀಗ ಮತ್ತೆ ತನ್ನ ಮಗನ ಬಳಿ ಸೇರಿದ್ದಾಳೆ. ಹೌದು 45 ವರ್ಷದ ಮಹಿಳೆಗೆ ಉತ್ತಮ ಕೆಲಸ ಕೊಡುಸುವುದಾಗಿ ನಂಬಿಸಿ  ಗ್ಯಾಂಗ್ ಒಂದು  ಆಕೆಯನ್ನ ವೇಶ್ಯಾವಾಟಿಕೆಗೆ ದೂಡಿತ್ತು. ಈ ಮಹಿಳೆ ಪ್ರತಿನಿತ್ಯ ಕಣ್ಣೀರು ಹಾಕುತ್ತಾ ಚಿತ್ರಹಿಂಸೆ ಅನುಭವಿಸುತ್ತಿದ್ದಳು. ಆಕೆಗಾಗಿ ಪ್ರತಿದಿನ ಗ್ರಾಹಕರು ಬರುತ್ತಿದ್ದರು. ಇದೇ ರೀತಿ ಆಕೆಯ ದೇಹ ಅರಸಿ ಬಂದಿದ್ದ ಗ್ರಾಹಕನೇ ಆಕೆಯ ಪಾಲಿಗೆ ದೇವರಾಗಿದ್ದಾನೆ. ಹೌದು ಆಕೆಯ ಬಳಿ ಬಂದಿದ್ದ ಗ್ರಾಹಕನ ಬಳಿ ಮಹಿಳೆಯು ತನ್ನ ಕಷ್ಟಗಳನ್ನ ಹೇಳಿಕೊಂಡು ನನಗೆ ಮಗನಿದ್ದಾನೆ ಆತನಿಗೆ ನನ್ನ ಬಗ್ಗೆ ದಯಮಾಡಿ ತಿಳಿಸಿ ಎಂದು ಮಗನ ನಂಬರ್ ಕೊಟ್ಟಿದ್ದಾಳೆ. ಮಹಿಳೆಯ ಕಥೆ ಕೇಳಿ ಮರುಗಿದ ಆ ವ್ಯಕ್ತಿ  ಹೊರಗಡೆ ಬಂದು ತಕ್ಷಣವೇ ಆಕೆಯ 21 ವರ್ಷ ವಯಸ್ಸಿನ ಮಗನಿಗೆ ಕರೆ ಮಾಡಿ  ಈ ವಿಚಾರವನ್ನ ತಿಳಿಸಿದ್ದಾನೆ. ಬಳಿಕ ಆಕೆಯ ಮಗ ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ.

ದಂಪತಿಯನ್ನು ಬಂಧಿಸಿ, 1 ತಿಂಗಳ ಮಗುವನ್ನು ಮಾರಿದ ಮೀಟರ್ ಬಡ್ಡಿ ಕುಳಗಳು..!

ಇದಾದ ಬಳಿಕ ಪುಣೆ ಪೊಲೀಸರು  ಪುಣೆಯ ಅಪರಾಧ ಶಾಖೆಯ ಸಾಮಾಜಿಕ ಭದ್ರತಾ ವಿಭಾಗದ ಪೊಲೀಸರು ಪುಣೆ ಬುದ್ವಾರ್ ಪೇಟೆ ಪ್ರದೇಶದ ವೇಶ್ಯಾಗೃಹದ ಮೇಲೆ ದಾಳಿ ನಡೆಸಿದ್ದಾರೆ. ಲೈಂಗಿಕ ದಂಧೆ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಅದೇ ರೀತಿ ವೇಶ್ಯಾವಾಟಿಕೆ ಉದ್ದೇಶಕ್ಕೆ ಮಹಿಳೆ ಮಾರಾಟ ಮಾಡಿದ್ದ ವ್ಯಕ್ತಿಗಳು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲು ಮಾಡಿರುವ ಪೊಲೀಸರು ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ್ದಾರೆ. ಆಕೆಯನ್ನು ಮಗನೊಂದಿಗೆ ಕಳುಹಿಸಲಾಗಿದೆ.

ಅಂದ್ಹಾಗೆ ಮಹಿಳೆ ಈ ದಂಧೆಯಲ್ಲಿ ಸಿಲುಕಿದ್ದು ಹೇಗೆ..?

ಪಶ್ಚಿಮ ಬಂಗಾಳದ ಮಹಿಳೆ ಕೋಲ್ಕತಾದಲ್ಲಿ ಗೃಹ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಗಂಡನನ್ನ ಕಳೆದುಕೊಂಡಿದ್ದ ಮಹಿಳೆ ಉತ್ತಮ ನೌಕರರಿಗಾಗಿ ಹುಡುಕಾಟ ನಡೆಸಿದ್ದರು. ಇದೇ ಸಂದರ್ಭದಲ್ಲೇ 2019ರಲ್ಲಿ ಮಹಿಳೆಗೆ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಇದೇ ವೇಳೆ ಆ ವ್ಯಕ್ತಿ ಉತ್ತಮ ವೇತನದ ಕೆಲಸ ಕೊಡಿಸುವುದಾಗಿ ಮಹಿಳೆಯನ್ನ ನಂಬಿಸಿ  ಮಹಾರಾಷ್ಟ್ರದ ಪುಣೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆಯನ್ನ ವೇಶ್ಯಾವಾಟಿಕೆಗೆ ತಳ್ಳಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd