ಗ್ಯಾಸ್ ಸಿಲಿಂಡರ್ ಖರೀದಿಯಲ್ಲಿ ಹೊಸ ನಿಯಮ ಜಾರಿ…
ನೀವು ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬಳುಸುವವರಾದರೇ ಗಮನಿಸಲೇ ಬೇಕಾದ ಸುದ್ದಿಯೊಂದು ಇಲ್ಲಿದೆ. ಒಂದು ವರ್ಷದಲ್ಲಿ ಎಷ್ಟು ಸಿಲಿಂಡರ್ ಖರೀದಿಸಬೇಕು ಎನ್ನುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನ ಹೊರಡಿಸಲಾಗಿದೆ,
ಇದರ ಪ್ರಕಾರ, ಈಗ ಯಾವುದೇ ಗ್ರಾಹಕರು ವರ್ಷಕ್ಕೆ 15 ಸಿಲಿಂಡರ್‌ಗಳನ್ನ ಮಾತ್ರ ಬುಕ್ ಮಾಡಬಹುದು. ಸಹಜವಾಗಿ ಒಂದು ವರ್ಷದಲ್ಲಿ 15 ಸಿಲಿಂಡರ್‌ಗಳನ್ನ ಮಾತ್ರ ಪಡೆಯಬಹುದು. ಅಲ್ಲದೆ, ನೀವು ತಿಂಗಳಲ್ಲಿ 2 ಸಿಲಿಂಡರ್‌ಗಳಿಗಿಂತ ಹೆಚ್ಚು ಖರೀದಿಸಲು ಸಾಧ್ಯವಿಲ್ಲ.
ಇದುವರೆಗೆ ಸಿಲಿಂಡರ್‌ಗಳನ್ನು ಪಡೆಯಲು ಮಾಸಿಕ ಅಥವಾ ವಾರ್ಷಿಕ ಕೋಟಾವನ್ನು ನಿಗದಿಪಡಿಸಲಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಒಂದು ವರ್ಷದಲ್ಲಿ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆ 12 ಕ್ಕೆ ಏರಿದೆ. ಸಹಜವಾಗಿ, ನೀವು 15 ಸಿಲಿಂಡರ್‌ಗಳನ್ನು ಖರೀದಿಸಿದರೂ, ನಿಮಗೆ ಈ ಸಬ್ಸಿಡಿ 12 ಸಿಲಿಂಡರ್‌ಗಳ ಮೇಲೆ ಮಾತ್ರ ಸಿಗುತ್ತದೆ.
ಹೊಸ ದರಗಳನ್ನು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ
ಐಒಸಿ ಪ್ರಕಾರ, ಅಕ್ಟೋಬರ್ 1 ರಿಂದ ಗ್ಯಾಸ್ ಸಿಲಿಂಡರ್‌ಗಳ ಹೊಸ ಬೆಲೆಗಳನ್ನು ಬಿಡುಗಡೆ ಮಾಡಲಾಗಿದೆ. ಇದಾದ ನಂತರ ದೆಹಲಿಯಲ್ಲಿ 1053 ರೂ., ಮುಂಬೈನಲ್ಲಿ 1052.5 ರೂ., ಚೆನ್ನೈನಲ್ಲಿ 1068.5 ರೂ., ಕೋಲ್ಕತ್ತಾದಲ್ಲಿ 1079 ರೂ.ಗೆ ಸಿಲಿಂಡರ್ ಬೆಲೆ ಏರಿಕೆಯಾಗಿದೆ.
LPG Cylinder: New rule in gas cylinder purchase…