LPG Rate: ನವರಾತ್ರಿಯಲ್ಲಿ ಇಳಿಕೆ ಕಂಡ ವಾಣಿಜ್ಯ ಸಿಲಿಂಡರ್ ಬೆಲೆ…
ನವರಾತ್ರಿ ಹಬ್ಬದ ಸಂದರ್ಭದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಕಂಡಿದೆ. ಪ್ರತಿ ತಿಂಗಳ ಮೊದಲ ದಿನದಂದು ಆಯಿಲ್ ಕಂಪನಿಗಳು ಗ್ಯಾಸ್ ಸಿಲೆಂಡರ್ ಬೆಲೆಯನ್ನ ಪರಿಷ್ಕರಿಸುತ್ತವೆ.
1 ಅಕ್ಟೋಬರ್ 2022 ಅಂದರೆ ಇಂದು 19 ಕೆಜಿ ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ ಪರಿಷ್ಕರಣೆಯಾಗಿದ್ದು, ಇಂಡೇನ್ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ 32 ರೂಪಾಯಿ ಕುಸಿತ ಕಂಡಿದೆ.
ಇಂಡೇನ್ ನ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 25.5 ರೂ., ಕೋಲ್ಕತ್ತಾದಲ್ಲಿ ರೂ. 36.5, ಮುಂಬೈನಲ್ಲಿ ರೂ. 32.5 ಮತ್ತು ಚೆನ್ನೈನಲ್ಲಿ ರೂ. 35.5 ಕಡಿಮೆಯಾಗಿದೆ. ಆದರೆ, 14.2 ಕೆಜಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಐದು ಕೆಜಿ ದೇಶೀಯ ಶಾರ್ಟ್ ಸಿಲಿಂಡರ್ ಗಳು 400.50 ರೂ.ಗೆ ದೊರೆಯಲಿವೆ. ಬದಲಾದ ದರಗಳು ಶನಿವಾರ ಬೆಳಗ್ಗೆ 6 ಗಂಟೆಯಿಂದಲೇ ಜಾರಿಗೆ ಬಂದಿವೆ. ಇಂದಿನಿಂದ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1859.5 ರೂ. ಕೋಲ್ಕತ್ತಾದಲ್ಲಿ 1995.5 ರೂ. ಮುಂಬೈನಲ್ಲಿ ರೂ 1811.5 ಮತ್ತು ಚೆನ್ನೈನಲ್ಲಿ ರೂ 2009.5 ಗೆ ಲಭ್ಯವಿರುತ್ತದೆ.
LPG Rate: LPG prices reduced in Navratri, no relief in the price of domestic gas cylinders