LSG vs KKR Match | ಕೊಲ್ಕತ್ತಾ ತಂಡದ ಪ್ಲೇಯಿಂಗ್ 11
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಗುದ್ದಾಟ ನಡೆಸಲಿವೆ. 15ನೇ ಸೀಸನ್ ನ ಇಂಡಿಯನ್ ಪ್ರಿಮಿಯರ್ ಲೀಗ್ ನ 53ನೇ ಪಂದ್ಯ ಇದಾಗಿದ್ದು, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ಲೇ ಆಫ್ಸ್ ದೃಷ್ಠಿಯಿಂದ ಈ ಪಂದ್ಯದಲ್ಲಿ ಗೆಲುವು ಕೆಕೆಆರ್ ಗೆ ಅನಿವಾರ್ಯವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವಿಗಾಗಿ ಕೆಕೆಆರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲು ಕಂಡರೇ ಪ್ಲೇ ಆಫ್ಸ್ ನಿಂದ ದೂರ ಸಾಗಲಿದೆ.
ಶ್ರೇಯಸ್ ಅಯ್ಯರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 15ನೇ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದೆ. ಈ ಪೈಕಿ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಆರು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಕೆಕೆಆರ್ ತಂಡ ಅಂಕಪಟ್ಟಿಯಲ್ಲಿ 8 ಎಂಟನೇ ಸ್ಥಾನಸದಲ್ಲಿದೆ.
ಇತ್ತ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಹೋರಾಟ ನಡೆಸಿತ್ತು. ಇದರಲ್ಲಿ ಕೆಕೆಆರ್ ತಂಡ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ನಿತೀಶ್ ರಾಣಾ 48 ರನ್ , ರಿಂಕು ಸಿಂಗ್ 52 ರನ್ ಗಳಿಸಿದ್ದರು.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿಚಾರಕ್ಕೆ ಬಂದರೇ
ತಂಡದ ಕಾಂಬಿನೇಷನ್, ಬ್ಯಾಟಿಂಗ್ ಆರ್ಡರ್ ಸೇರಿದಂತೆ ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚ್ ಬ್ರೆಡಂ ಮೆಕ್ಕಲಂ ನಡುವೆ ಗೊಂದಲಗಳಿರುವುದು ಸತ್ಯ. ಮೇಲ್ನೋಟಕ್ಕೆ ಕೆಕೆಆರ್ ತಂಡ ಬಲಿಷ್ಠವಾಗಿದೆ. ತಂಡದಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಆದ್ರೆ ಸ್ಥಿರ ಪ್ರದರ್ಶನ ಮತ್ತು ಸಂಘಟಿತ ಆಟವನ್ನು ಆಡುತ್ತಿಲ್ಲ.
ಮುಖ್ಯವಾಗಿ ಸ್ಟಾರ್ ಪ್ಲೇಯರ್ಸ್ ನಿರೀಕ್ಷಿತ ಮಟ್ಟದಲ್ಲಿ ಆಡುತ್ತಿಲ್ಲ. ಆರಂಭಿಕ ವೆಂಕಟೇಶ್ ಅಯ್ಯರ್ ವೈಫಲ್ಯ ತಂಡಕ್ಕೆ ಮೈನಸ್ ಆಗುತ್ತಿದೆ. ಇನ್ನು ಆರೋನ್ ಫಿಂಚ್, ಆಂಡ್ರ್ಯೂ ರಸೆಲ್, ಸುನೀಲ್ ನರೇನ್ ಬ್ಯಾಟಿಂಗ್ ನಲ್ಲಿ ಸ್ಥಿರ ಆಟವನ್ನಾಡುತ್ತಿಲ್ಲ. ನಾಯಕ ಶ್ರೇಯಸ್ ಅಯ್ಯರ್ ಮತ್ತು ನಿತೇಶ್ ರಾಣಾ ಜವಾಬ್ದಾರಿಯಿಂದ ಆಡಿದ್ರೂ ತಂಡವನ್ನು ಗೆಲುವಿನ ದಡ ಸೇರಿಸಲು ಆಗುತ್ತಿಲ್ಲ.
ಇನ್ನು ಬೌಲಿಂಗ್ ವಿಚಾರಕ್ಕೆ ಬಂದರೇ ಬೌಲಿಂಗ್ನಲ್ಲಿ ಉಮೇಶ್ ಯಾದವ್ ಸ್ಥಿರತೆ ತಂದಿದ್ದಾರೆ. ಆದರೆ ಟಿಮ್ ಸೌಥಿ ಮತ್ತು ಶಿವಂ ಮಾವಿ ಲೈನ್ ಅಂಡ್ ಲೆಂಗ್ತ್ ಕಂಡುಕೊಳ್ಳಬೇಕಿದೆ. ಸುನೀಲ್ ನರೈನ್ ಮಿಸ್ಟ್ರಿ ಸ್ಪಿನ್ ಮತ್ತು ಅನುಕೂಲ್ ರಾಯ್ ಎಡಗೈ ಸ್ಪಿನ್ ಬಲ ತಂಡಕ್ಕಿದೆ.
ಪ್ಲೇಯಿಂಗ್
ಆರನ್ ಫಿಂಚ್, ಬಾಬಾ ಇಂದ್ರಜಿತ್ (wk), ಶ್ರೇಯಸ್ ಅಯ್ಯರ್ (c), ರಿಂಕು ಸಿಂಗ್, ನಿತೀಶ್ ರಾಣಾ, ಆಂಡ್ರೆ ರಸೆಲ್, ಸುನಿಲ್ ನರೈನ್, ಅನುಕುಲ್ ರಾಯ್, ಉಮೇಶ್ ಯಾದವ್, ಟಿಮ್ ಸೌಥಿ, ಶಿವಂ ಮಾವಿ
LSG vs KKR Match Kolkata night riders Playing 11