LSG vs KKR Match | ರೈಡರ್ಸ್ ವಿರುದ್ಧ ಗೆಲುವು | ಅಗ್ರಸ್ಥಾನಕ್ಕೇರಿದ ಜೈಂಟ್ಸ್
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲು ಕಂಡಿದೆ.
ಆ ಮೂಲಕ 15ನೇ ಸೀಸನ್ ಇಂಡಿಯನ್ ಪ್ರಿಮಿಯರ್ ಲೀಗ್ ನ ಪ್ಲೇ ಆಫ್ಸ್ ಹಾದಿಯಿಂದ ದೂರ ಸರಿದಿದೆ.
ಇತ್ತ ಈ ಪಂದ್ಯದಲ್ಲಿ 75 ರನ್ ಗಳಿಂದ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ, ಪ್ಲೇ ಆಫ್ಸ್ ಪ್ರವೇಶಿಸುವುದನ್ನ ಗಟ್ಟಿ ಮಾಡಿಕೊಂಡಿದೆ.
ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು.
ಟಾರ್ಗೆಟ್ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್, ಬ್ಯಾಟ್ಸ್ಮನ್ಗಳ ವೈಫಲ್ಯದಿಂದ 14.3 ಓವರ್ಗಳಲ್ಲಿ 101 ರನ್ಗಳಿಗೆ ಸರ್ವಪತನ ಕಂಡಿತು. ಆ ಮೂಲಕ 75 ರನ್ಗಳ ಹೀನಾಯ ಸೋಲನುಭವಿಸಿತು.
ಟಾಸ್ ಸೋತು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, ಆರಂಭಿಕ ಆಘಾತ ಕಂಡಿತು. ನಾಯಕ ಕೆ.ಎಲ್.ರಾಹುಲ್ ಶೂನ್ಯಕ್ಕೆ ಔಟ್ ಆದ್ರು.
ಆದ್ರೆ ನಂತರ ಕ್ವಿಂಟನ್ ಡಿ ಕಾಕ್ ಮತ್ತು ದೀಪಕ್ ಹೂಡ 2ನೇ ವಿಕೆಟ್ ಗೆ 71 ರನ್ ಗಳ ಭರ್ಜರಿ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.
ಕ್ವಿಂಟನ್ ಡಿಕಾಕ್ 29 ಎಸೆತಗಳಲ್ಲಿ 50 ರನ್ ಗಳಿಸಿದ್ರೆ ದೀಪಕ್ ಹೂಡ 27 ಎಸೆತಗಳಲ್ಲಿ 41 ರನ್ ಬಾರಿಸಿದರು.
ನಂತರ ಬಂದ ಕೃನಾಲ್ ಪಾಂಡ್ಯ(25), ಮಾರ್ಕಸ್ ಸ್ಟಾಯ್ನಿಸ್(28), ಆಯುಷ್ ಬಡೋನಿ(15*) ಹಾಗೂ ಜೇಸನ್ ಹೋಲ್ಡರ್(13) ರನ್ ಗಳಿಸಿದರು.
ಪರಿಣಾಮ ಲಕ್ನೋ 20 ಓವರ್ಗಳಲ್ಲಿ 176 ರನ್ಗಳ ಸ್ಪರ್ಧಾತ್ಮಕ ಮೊತ್ತಕಲೆಹಾಕಿತು.
ಪಂದ್ಯ ಗೆಲ್ಲಲು 177 ರನ್ ಟಾರ್ಗೆಟ್ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ಗೆ ಉತ್ತಮ ಆರಂಭ ಸಿಗಲಿಲ್ಲ.
ಬಾಬಾ ಇಂದ್ರಜಿತ್ ಶೂನ್ಯಕ್ಕೆ ನಿರ್ಗಮಿಸಿದರೇ ನಾಯಕ ಶ್ರೇಯಸ್ ಅಯ್ಯರ್ 6ರನ್, ನಿತೀಶ್ ರಾಣಾ 2 ರನ್ ಗಳಿಸಿ ಬೇಗನೇ ಪೆವಿಲಿಯನ್ ಸೇರಿಕೊಂಡರು.
ಇವರ ಹಿಂದಯೇ ಆರೋನ್ ಪಿಂಚ್ ಕೂಡ 14 ರನ್ ಗಳಿಗೆ ಆಟ ಮುಗಿಸಿದರು.
ಪರಿಣಾಮ ಕೇವಲ 25 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡ ಕೆಕೆಆರ್ ಸಂಕಷ್ಟಕ್ಕೆ ಸಿಲುಕಿತು.
ಈ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಬೇಕಿದ್ದ ರಿಂಕು ಸಿಂಗ್ ಆರು ರನ್ ಗಳಿಸಿ ಔಟ್ ಆದ್ರು.
ಆದ್ರೆ ವಿಂಡೀಸ್ ಆಲ್ ರೌಂಡರ್ ಗಳಾದ ಆಂಡ್ರೆ ರಸೆಲ್ ಮತ್ತು ಸುನೀಲ್ ನರೈಸ್ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು.
ರಸೆಲ್ 19 ಎಸೆತಗಳಲ್ಲಿ ಮೂರು ಬೌಂಡರಿ, ಐದು ಸಿಕ್ಸರ್ ಗಳ ನೆರವಿನಿಂದ 45 ರನ್ ಗಳಿಸಿದ್ರೆ ಸುನೀಲ್ ನರೈನ್ 12 ಎಸೆತಗಳಲ್ಲಿ 22 ರನ್ ಗಳಿಸಿದರು.
ಲಕ್ನೋ ತಂಡದ ಪರ ಆವೇಶ್ ಖಾನ್, ಜೇಸನ್ ಹೋಲ್ಡರ್ ತಲಾ ಮೂರು ವಿಕೆಟ್ ಪಡೆದರು.
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಆಡಿರುವ 11 ಪಂದ್ಯಗಳಲ್ಲಿ 8 ಗೆಲುವು ಹಾಗೂ 3 ಸೋಲಿನಿಂದ 16 ಪಾಯಿಂಟ್ಸ್ ಪಡೆದಿರುವ ಲಕ್ನೋ, +0.703 ರನ್ರೇಟ್ನೊಂದಿಗೆ ಅಗ್ರಸ್ಥಾನಕ್ಕೇರಿತು.
lsg-vs-kkr-match-Lucknow Super Giants Beat Kolkata Knight Riders By 75 Runs