RR vs LSG Match | ಗೆಲುವಿಗಾಗಿ ಲಕ್ನೋ – ರಾಜಸ್ಥಾನ್ ಗುದ್ದಾಟ

1 min read
lsg vs rr match prediction saaksha tv

lsg vs rr match prediction saaksha tv

RR vs LSG Match | ಗೆಲುವಿಗಾಗಿ ಲಕ್ನೋ – ರಾಜಸ್ಥಾನ್ ಗುದ್ದಾಟ

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 63ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಈ ಪಂದ್ಯ ಮುಂಬೈನ ಬ್ರಬೋರ್ನ್ ಅಂಗಣದಲ್ಲಿ ನಡೆಯಲಿದೆ. ಪ್ಲೇ ಆಫ್ಸ್ ದೃಷ್ಠಿಯಿಂದ ಎರಡೂ ತಂಡಗಳಿಗೂ ಇಂದಿನ ಪಂದ್ಯ ಮಹತ್ವದ್ದಾಗಿದೆ.

ಈ ಪಂದ್ಯ ಗೆದ್ದು ಅಂತಿಮ ನಾಲ್ಕರ ಘಟ್ಟ ಅಧಿಕೃತಪಡಿಸಿಕೊಳ್ಳೋದು ಲಕ್ನೋ ತಂಡದ ಲೆಕ್ಕಾಚಾರವಾಗಿದ್ದರೇ, ರಾಜಸ್ಥಾನ್ ತಂಡ ಪಂದ್ಯ ಗೆದ್ದು ಪ್ಲೇ ಆಫ್ಸ್ ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿರುವ 12 ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಗೆದ್ದುಕೊಂಡಿದೆ.

ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಸೋಲು ಅನುಭವಿಸಿದೆ. ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಇನ್ನೊಂದೆಡೆ ರಾಜಸ್ತಾನ ರಾಯಲ್ಸ್ ತಂಡ ಆಡಿರುವ 12 ಪಂದ್ಯಗಳಲ್ಲಿ ಏಳು ಪಂದ್ಯಗಳಲ್ಲಿ ಗೆಲುವು ಮತ್ತು ಐದು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಿ ಸೋಲು ಕಂಡಿದೆ.

ಇತ್ತ ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್ ಗಳಿಂದ ಸೋಲು ಕಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವು ಎರಡೂ ತಂಡಗಳಿಗೂ ಅನಿವಾರ್ಯವಾಗಿದೆ.

lsg vs rr match prediction saaksha tv
lsg vs rr match prediction saaksha tv

ಕಳೆದ ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ರಾಜಸ್ಥಾನ್ ರಾಯಲ್ಸ್ ತಂಡ ಮೂರು ರನ್ ಗಳಿಂದ ಜಯ ಸಾಧಿಸಿದೆ. ಹೀಗಾಗಿ ಲಕ್ನೋ ತಂಡಕ್ಕೆ ಈ ಪಂದ್ಯ ಸೇಡಿನ ಸಮರವಾಗಿದೆ.

ತಂಡಗಳ ಬಲಾಬಲದ  ವಿಚಾರಕ್ಕೆ ಬಂದರೇ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಾಲಿಡ್ ಆಗಿದೆ. ಬ್ಯಾಟಿಂಗ್ ನಲ್ಲಿ ಕೆ.ಎಲ್.ರಾಹುಲ್, ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಸ್ಟೋಯ್ನಿಸ್, ಕೃನಾಲ್ ತಂಡಕ್ಕೆ ನೆರವಾಗುತ್ತಿದ್ದಾರೆ. ಬೌಲಿಂಗ್ ನಲ್ಲಿ ಆವೇಶ್ ಖಾನ್, ದುಶ್ಮಂತಾ ಚಮೀರಾ, ಮೋಶಿನ್ ಖಾನ್ ವಿಕೆಟ್ ಬೇಟೆಯಾಡುತ್ತಿದ್ದಾರೆ.

ಇತ್ತ ರಾಜಸ್ಥಾನ್ ರಾಯಲ್ಸ್ ವಿಚಾರಕ್ಕೆ ಬಂದರೇ ಆರ್ ಆರ್ ತಂಡ ಕೂಡ ಮೂರು ವಿಭಾಗದಲ್ಲಿ ಬಲಿಷ್ಠವಾಗಿದೆ. ಯುವ ಮತ್ತು ಅನುಭವಿ ಆಟಗಾರರ ಸಮ್ಮಿಲನ ರಾಜಸ್ಥಾನ್ ರಾಯಲ್ಸ್ ತಂಡ. ಬ್ಯಾಟಿಂಗ್ ನಲ್ಲಿ ಜೋಶ್ ಬಟ್ಲರ್, ಯಶಸ್ವಿ ಜಯಸ್ವಾಲ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ ಮಿಂಚುತ್ತಿದ್ದಾರೆ. ರವಿಚಂದ್ರನ್ ಅಶ್ವಿನ್ ಕೂಡ ಬ್ಯಾಟರ್ ನಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಬೌಲಿಂಗ್ ನಲ್ಲಿ ಯುಜುವೇಂದ್ರ ಚಹಾಲ್, ಕುಲ್ ದೀಪ್ ಸೇನ್, ಪ್ರಸಿದ್ಧ ಕೃಷ್ಣ, ಟ್ರೆಂಟ್ ಬೌಲ್ಟ್ ತಂಡಕ್ಕೆ ಬ್ರೇಕ್ ನೀಡಿದ್ದಾರೆ. lsg vs rr match prediction

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd