ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಕರ್ನಾಟಕದ ಲೆಫ್ಟಿನೆಂಟ್ ಜನರಲ್ ಸಿ.ಬನ್ಸಿ ಪೊನ್ನಪ್ಪ Saaksha Tv
ನವದೆಹಲಿ : ಭಾರತೀಯ ಸೇನೆಯ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಸಿ.ಬನ್ಸಿ ಪೊನ್ನಪ್ಪ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಭಾರತೀಯ ಉನ್ನತ ಸ್ಥಾನಗಳನ್ನು ಕರ್ನಾಟಕದ ಹಲವರು ಅಲಂಕರಿಸಿದ್ದಾರೆ. ಈಗ ಮತ್ತೊಬ್ಬ ಕೊಡಗಿನ ವೀರರೊಬ್ಬರು ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಹೌದು ಭಾರತೀಯ ಸೇನೆಯ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಸಿ.ಬನ್ಸಿ ಪೊನ್ನಪ್ಪ ಅವರು ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ.
ಬನ್ಸಿ ಪೊನ್ನಪ್ಪ ಅವರು ಕೊಡಗಿನ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಸಮೀಪದ ನಂಗಾಲ ಗ್ರಾಮದವರಾಗಿದ್ದು, ಚನ್ನೀರ ಪೊನ್ನಪ್ಪ ಮತ್ತು ಮೀರಾ ದಂಪತಿಯ ಪುತ್ರರಾಗಿದ್ದಾರೆ. ಅವರು ನಿತ್ಯಾ ಮೇದಪ್ಪ ಅವರನ್ನು ವಿವಾಹವಾಗಿರುವ ಅವರ ಪುತ್ರ ನಿಶಾಂತ್ ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡೆಪ್ಯುಟಿ ಸಿಡಿಎಸ್ ಆಗಿರುವ ಇವರು ಭಾರತೀಯ ಸೇನೆ ವಜ್ರ ಕಾರ್ಪ್ಸ್ ತುಕಡಿಗೆ ಕಮಾಂಡಿಂಗ್ ಮಾಡುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಸೇನೆ ಹೇಳಿಕೆ ನೀಡಿದೆ.








