Lucknow Building Collapse : ನಾಲ್ಕು ಅಂತಸ್ಥಿನ ಕಟ್ಟಡ ಕುಸಿತ: ಮೂವರ ಸಾವು…
ನಾಲ್ಕು ಅಂತಸ್ಥಿನ ಕಟ್ಟಡ ಕುಸಿದು ಬಿದ್ದು ಮೂವರು ಸಾವನ್ನಪ್ಪಿದ್ದು ಹಲವು ಮಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದಿದೆ. ಲಕ್ನೋದ ಹಜರತ್ ಗಂಜ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಮಂಗಳವಾರ ರಾತ್ರಿ ಕುಸಿದು ಬಿದ್ದಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆ ನಡೆಸಿ 12 ಮಂದಿಯನ್ನ ರಕ್ಷಿಸಿದ್ದಾರೆ. ಇನ್ನೂ ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಕಟ್ಟದ ಮಾಲಿಕರಾದ ಎಸ್ಪಿ ಶಾಸಕ ಶಾಹಿದ್ ಮಂಜೂರ್ ಅವರ ಪುತ್ರ ನವಾಜಿಶ್ ನನ್ನು ಮೀರತ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
Lucknow Building Collapse: Four storied building collapse: Three dead…








