IPL 2022 | ಲಕ್ನೋ ತಂಡದಲ್ಲಿ ಜ್ಯೂನಿಯರ್ ಎಬಿಡಿ..
ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಆಯುಷ್ ಬದೋನಿ ಮೇಲೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಐಪಿಎಲ್-2022 ರ ಅಂಗವಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಐದು ವಿಕೆಟ್ಗಳಿಂದ ಸೋತಿದೆ.
ಆದರೆ, ಲಕ್ನೋ ತಂಡವನ್ನು ಪ್ರತಿನಿಧಿಸುತ್ತಿರುವ ಬಡೋನಿ ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಅಮೋಘ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಅವರು ಮೊಹಮ್ಮದ್ ಶಮಿ, ಲಕ್ಕಿ ಫರ್ಗುಸನ್ ಮತ್ತು ರಶೀದ್ ಖಾನ್ ಅವರಂತಹ ಸ್ಟಾರ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು.
ಪಂದ್ಯದಲ್ಲಿ ಬದೋನಿ 41 ಎಸೆತಗಳಲ್ಲಿ 54 ರನ್ ಚಚ್ಚಿದರು. ಅವರ ಇನ್ನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ಗಳು ಸೇರಿವೆ.
29 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಲಕ್ನೋ ತಂಡವನ್ನು ದೀಪಕ್ ಹೂಡಾ ಜೊತೆಗೂಡಿ ಬದೋನಿ ಮೇಲೆತ್ತಿದ್ರು.
ಪರಿಣಾಮ ಲಕ್ನೋ ತಂಡ ನಿಗದಿತ 20 ಓವರ್ಗಳಲ್ಲಿ 158 ರನ್ ಗಳಿಸಿತು. ಆದ್ರೆ ಗುಜರಾತ್ ಟೈಟಾನ್ಸ್ ತಂಡ ಈ ಮೊತ್ತವನ್ನ ಚೇಸ್ ಮಾಡಿ ವಿಜಯದ ಪತಾಕೆ ಹಾರಿಸಿದೆ.
ಪಂದ್ಯದ ಬಳಿಕ ಮಾತನಾಡಿದ ಕೆ.ಎಲ್.ರಾಹುಲ್, ಬಡೋನಿ ಜೂನಿಯರ್ ಎಬಿಡಿ ಎಂದು ಶ್ಲಾಘಿಸಿದ್ದಾರೆ.
ಆಯುಷ್ ನಮ್ಮ ತಂಡದ ಎಬಿಡಿ ಇದ್ದಂತೆ. ಮೈದಾನದ ಅಷ್ಟದಿಕ್ಕುಗಳಿಗೂ ಚೆಂಡನ್ನ ಹೊಡೆಯಬಲ್ಲರು.
ಆಯುಷ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದರು. ಅದಾಗಲೇ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
ಆದರೆ, ತೀವ್ರ ಒತ್ತಡದ ನಡುವೆಯೂ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು,’’ ಎಂದು ರಾಹುಲ್ ಹೇಳಿದ್ದಾರೆ. Lucknow Super Giants’ new batter ayush-badoni