ಪಂಜಾಬ್ CM ಭಾಗವಹಿಸಿದ್ದ ಸಭೆಯಲ್ಲಿ ಉಚಿತ ಊಟಕ್ಕಾಗಿ ಶಿಕ್ಷಕರ ತಳ್ಳಾಟ (ವೀಡಿಯೋ)

1 min read

ಪಂಜಾಬ್ CM ಭಾಗವಹಿಸಿದ್ದ ಸಭೆಯಲ್ಲಿ ಉಚಿತ ಊಟಕ್ಕಾಗಿ ಶಿಕ್ಷಕರ ತಳ್ಳಾಟ (ವೀಡಿಯೋ)

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್  ಭಾಗವಹಿಸಿದ್ದ ಸಭೆಯಲ್ಲಿ ಉಚಿತ ಆಹಾರಕ್ಕಾಗಿ ಶಿಕ್ಷಕರು ಪ್ರಾಂಶುಪಾಲರು ಮಧ್ಯೆ ನೂಕು ನುಗ್ಗಲು ಉಂಟಾದ ಘಟನೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ.

ಪಂಜಾಬ್‌ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯಸ್ಥರು ಮತ್ತು ಶಿಕ್ಷಕರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿದವರಿಗೆ ಉಚಿತ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.  ಸಭೆ ಮುಗಿದ ನಂತರ ಒಮ್ಮೆಗೆ ಮುಗಿಬಿದ್ದು ಊಟಕ್ಕೆ ತೆರಳಿದ್ದು, ಊಟದ ಪ್ಲೇಟ್‌ಗಾಗಿ  ಪರಸ್ಪರ ನೂಕಾಡಿದ ಘಟನೆ ನಡೆದಿದೆ.

ಲೂಧಿಯಾನದ ಖ್ಯಾತ ರೆಸಾರ್ಟ್‌ನಲ್ಲಿ ಸೆರೆಯಾದ ಈ ದೃಶ್ಯಗಳು ಕ್ಯಾಮರೆದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ  ವೈರಲ್ ಆಗಿವೆ.   ಶಿಕ್ಷಣ ಇಲಾಖೆಯು ಶಿಕ್ಷಣದ ಗುಣಮಟ್ಟದ ಕುರಿತು ಚರ್ಚಿಸಲು ರಾಜ್ಯದ 2,600 ಕ್ಕೂ ಹೆಚ್ಚು ಶಾಲಾ ಮುಖ್ಯಸ್ಥರು ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳ ಸಭೆಯನ್ನು ಸರ್ಕಾರ ಕರೆದಿತ್ತು.

ಟ್ವಿಟ್ಟರ್‌ನಲ್ಲಿ ವೀಡಿಯೋ ಶೇರ್ ಮಾಡಿರುವ ನೆಟ್ಟಿಗರೊಬ್ಬರು, ‘ಪಂಜಾಬ್‌ನ ಲುಧಿಯಾನಾದಲ್ಲಿ ಸಿಎಂ ಭಗವಂತ್ ಮಾನ್ ಮತ್ತು ಶಿಕ್ಷಣ ಸಚಿವರ ಭೇಟಿಯ ನಂತರ ಪ್ರಾಂಶುಪಾಲರು ಮತ್ತು ಶಿಕ್ಷಕರ ಊಟದ ದೃಶ್ಯ. ಅವರು ಅನೇಕ ದಿನಗಳಿಂದ ಹಸಿವಿನಿಂದ ಬಳಲುತ್ತಿರುವಂತೆ ತೋರುತ್ತಿದೆ ಅಥವಾ ಅವರು ಉಚಿತ ಊಟವನ್ನು ಕಳೆದುಕೊಳ್ಳಲು ಬಯಸಲಿಲ್ಲ’ ಎಂದು ಬರೆದಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd