M.B.Patil : 140 ಸ್ಥಾನ ಗೆದ್ದು ಸರ್ಕಾರ ರಚಿಸ್ತೇವೆ
ಬೆಂಗಳೂರು : ಮುಂಬರುವ ಚುನಾವಣೆಯಲ್ಲಿ ೧೪೦ ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. m-b-patil-press meet in Bangalore saaksha tv
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ.ಮುಂಬರುವ ಚುನಾವಣೆಯಲ್ಲಿ ೧೪೦ ಸ್ಥಾನ ಗೆದ್ದು ಸರ್ಕಾರ ಅಧಿಕಾರಕ್ಕೆ ಬರ್ತೇವೆ.
ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಸಿಎಂ ಇಬ್ರಾಯಿಂ ಅವರನ್ನು ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚೆರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಹಿಜಾಬ್ ಪ್ರಕರಣ ಬಹಳ ಖೇದಕರವಾದ ವಿಚಾರ. ಶಾಲಾ ಕಾಲೇಜುಗಳಲ್ಲಿ ಧಾರ್ಮಿಕಯನ್ನು ಬಿಂಬಿಸಿ ಮಕ್ಕಳಿಗೆ ದಾರಿ ತಪ್ಪಿಸುವ ಕೆಲಸ ಮಾಡಬಾರದು.
ಸರ್ಕಾರ ತಪ್ಪನ್ನು ಮಾಡಿದೆ.ಶಾಲಾ ಕಾಲೇಜುಗಳಲ್ಲಿ ರಾಜಕೀಯ ಬೆರಸಬಾರದು. ಸಮವಸ್ತ್ರ ಆದೇಶ ಹೊರಡಿಸಿದೆ. ಹಿಂದಿನ ಸ್ಥಿತಿಯನ್ನು ಮುಂದುವರೆಸಬೇಕಿದೆ.
ಶಾಲಾ ಕಾಲೇಜುಗಳಲ್ಲಿ ರಾಜಕೀಯ ಹಸ್ತಕ್ಷೇಪ, ವಿಷ ಬೀಜ ಬಿತ್ತಬಾರದು. ಇದೆಲ್ಲಾ ಆರಂಭವಾಗಿದ್ದೆ ಬಿಜೆಪಿಯಿಂದ ಎಂದು ಆರೋಪಿಸಿದರು.
ಅಲ್ಲದೇ ನಾರಾಯಣ ಗುರುಗಳ ಸ್ತಬ್ದ ಚಿತ್ರ ಪ್ರಕರಣದಿಂದ ಎದ್ದಿದ್ದ ಹೋರಾಟ ಹಾದಿ ತಪ್ಪಿಸುವ ಪ್ರಯತ್ನಕ್ಕೆ ಮತ್ತೊಂದು ವಿವಾದ ಹುಟ್ಟಿ ಹಾಕಿ ತಮ್ಮ ಮೇಲೆ ಬಂದಿರುವ ಕೆಲಸ ಆಗಬಾರದು ಎಂದು ಪಾಟೀಲ್ ದೂರಿದರು.
ಇನ್ನು ಕಾಂಗ್ರೆಸ್ ಕಾಂಗ್ರೆಸ್ ಗೋವಾದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡುವ ಹಿನ್ನಲೆಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ನ್ಯಾಯ ಯೋಜನೆಯನ್ನು ನೀಡುವುದಾಗಿ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ.
ಅಂತರ್ಜಲ ವಿವಾದ ಸಂಬಂಧಿಸಿದಂತೆ ಮಹದಾಯಿ, ಹಿತವನ್ನು ಕರ್ನಾಟಕ ಬಿಟ್ಟುಕೊಡಲು ಸಾಧ್ಯವಿಲ್ಲ.
ಗೋವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತುಕತೆ ಮೂಲಕ ಬಗೆಹರಿಸಿ ಕೊಳ್ಳುತ್ತೇವೆ. ೩.೫ ಟಿಎಂಸಿ ನೀರು ನಮಗೆ ಹಂಚಿಕೆ ಮಾಡಲಾಗಿದೆ. ಕನ್ನಡಗರು ಗೋವಾದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದರು.