maa canteen in west bengal
ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಬಂಗಾಳದಲ್ಲಿ ಶುರುವಾಯ್ತು ‘ಮಾ’ ಕ್ಯಾಂಟೀನ್..!
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವನೆ ಸಮೀಪದಲ್ಲೇ ಇದ್ದು, ಆಡಳಿತ ರೂಢ ಪಕ್ಷವಾಗಿರುವ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ TMC ಪಕ್ಷ ನಾನಾ ಕಸರತ್ತುಗಳನ್ನ ನಡೆಸುತ್ತಲೇ ಇದೆ. ಇದೀಗ ಕರ್ನಾಟಕದಲ್ಲಿನ ಇಂದಿರಾ ಕ್ಯಾಂಟೀನ್ ಮಾದರಿಯಲ್ವಲೇ ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ‘ಮಾ’ ಕ್ಯಾಂಟೀನ್ ಆರಂಭವಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರದ ‘ಮಾ’ ಕ್ಯಾಂಟೀನ್ ನಲ್ಲಿ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯಕರ ಆಹಾರ ಒದಗಿಸಲಾಗುತ್ತೆ. ಅದು ಕೂಡ ಕೇವಲ 5 ರೂಪಾಯಿಗಳಿಗೆ.
ರ್ಯಾಗಿಂಗ್ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲರ ಮೇಲೆಯೇ ಹಲ್ಲೆ ಮಾಡಿದ ವಿದ್ಯಾರ್ಥಿಗಳು..!
ಅಂದ್ಹಾಗೆ ಫೆಬ್ರವರಿಯಲ್ಲಿ ಈ ಕ್ಯಾಂಟೀನ್ ಆರಂಭವಾಗಿದ್ದು, ಬಡವರಿಗೆ ಕೇವಲ 5 ರೂಪಾಯಿಗೆ ಹೊಟ್ಟೆ ತುಂಬ ಊಟ ನೀಡಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಾ ಕ್ಯಾಂಟೀನ್ ಮಧ್ಯಾಹ್ನ, 12.30 ರಿಂದ 3.00 ಗಂಟೆಯವರೆಗೆ ಜನರಿಗೆ ಊಟ ನೀಡುವ ವ್ಯವಸ್ಥೆ ಮಾಡಲಾಗಿದೆ. ಊಟದ ಮೆನ್ಯುವಿನಲ್ಲಿ ಸಾಂಬಾರ್, ಕರಿ ಮತ್ತು ಮೊಟ್ಟೆ ಕರಿಯನ್ನ ಸೇರಿಸಲಾಗಿದೆ. ಇನ್ನೂ ಪಶ್ಚಿಮ ಬಂಗಾಳ ಸರ್ಕಾರವು ಈಗಾಗಲೇ ಬಜೆಟ್ ನಲ್ಲಿ ಈ ‘ಮಾ’ ಕ್ಯಾಟೀಂನ್ ಗಾಗಿ 100 ಕೋಟಿ ರೂಪಾಯಿಯನ್ನು ಕಾಯ್ದಿರಿಸಿದೆ.
ಪೂರ್ವ ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನ : 11 ಸೇನಾ ಸಿಬ್ಬಂದಿ ಸಾವು
maa canteen in west bengal