ಚೀನಾ ಮೂಲದ ಉಪಕರಣಗಳನ್ನ ಭಾರತದಿಂದ ದೂರವಿರಿಸಲು ಕೇಂದ್ರದಿಂದ ಹೊಸ ನಿಯಮ ಜಾರಿ..!
ನವದೆಹಲಿ: ಮೇಡ್ ಇನ್ ಇಂಡಿಯಾ ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸ ನಿಯಮವೊಂದನ್ನ ಜಾರಿಮಾಡಲು ಹೊರಟಿದೆ. ಅಲ್ದೇ ಕೇಂದ್ರದ ಸರ್ಕಾರದ ಈ ನಡೆಯ ಹಿಂದೆ ಮತ್ತೊಂದು ಮುಖ್ಯ ಉದ್ದೇಶ ಚೀನಾ ಮೂಲದ ವಸ್ತುಗಳುಗೆ ಭಾರತದಲ್ಲಿ ಕಡಿವಾಣ ಹಾಕುವುದು. ಮೇಡ್ ಇನ್ ಇಂಡಿಯಾಗೆ ಉತ್ತೇಜನ ನೀಡಿವುದು. ಅಂದ್ಹಾಗೆ ಏನದು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ನಿಯಮ…?
ಕೇಂದ್ರ ಸರ್ಕಾರ ಈ ಹೊಸ ನಿಯಮದ ಅನ್ವಯ ದೇಶದ ಎಲ್ಲ ಟೆಲಿಕಾಂ ಸೇವಾದಾರ ಕಂಪನಿಗಳು ಸಹ ಇನ್ಮುಂದೆ ಕೇಂದ್ರ ಸರ್ಕಾರ ಅನುಮೋದಿಸಿದ ಕಂಪನಿಗಳ ಮತ್ತು ತಯಾರಕ ಉಪಕರಣಗಳನ್ನ ಮಾತ್ರವೇ ಬಳಸಿಕೊಂಡು ನೆಟ್ ವರ್ಕ್ ವಿಸ್ತರಣೆ, ತಾಂತ್ರಿಕ ಕೆಲಸವನ್ನು ಮಾಡಬೇಕಾಗಿದೆ.
ದೀದಿ ಮೇಲಿನ ಹಲ್ಲೆ ಪ್ರಕರಣ: TMC ವ್ಯವಸ್ಥಿತ ನಾಟಕವೇ ಗೊತ್ತಾಗಬೇಕಿದೆ – ದಿಲೀಪ್ ಘೋಷ್
ಹೌದು ಈ ನಿಯಮದ ಅನ್ವಯ ಸರ್ಕಾರದ ಅನುಮತಿ ಇಲ್ಲದ ಉಪಕರಣಗಳ ಬಳಕೆ ನಿಷೇಧವಾಗಿದ್ದು, ಈ ಕುರಿತ ಟೆಲಿಕಾಂ ನಿಯಮ ತಿದ್ದುಪಡಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಜೂನ್ 15ರಿಂದ ಈ ನಿಯಮವು ಅಧಿಕೃತವಾಗಿ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರವು ದೇಶದಲ್ಲಿ 5G ನೆಟ್ ವರ್ಕ್ ಅಳವಡಿಕೆಗೂ ಮುನ್ನವೇ ಚೀನಾ ಮೂಲದ ಹುವೈ ಮತ್ತು ZTE ಕಂಪನಿಗಳನ್ನು ದೂರವಿರಿಸುವ ಪ್ರಮುಖ ಉದ್ದೇಶವನ್ನ ಇಟ್ಟುಕೊಂಡು ಈ ನಿಯಮ ಜಾರಿಗೆ ತಂದಿದೆ.
ಶಿವಣ್ಣನ 125ನೇ ಸಿನಿಮಾ ಘೋಷಣೆ : 4ನೇ ಬಾರಿಗೆ ಒಂದಾದ ಭಜರಂಗಿ ಕಾಂಬೋ..!
ದರ್ಶನ್ ಸಿನಿಮಾ `ರಾ’BUT : ಬಿಲ್ಡಪ್ ಇಲ್ಲದ ರಾಬರ್ಟ್ ರಿವ್ಯೂವ್