ಶಿವಣ್ಣನ 125ನೇ ಸಿನಿಮಾ ಘೋಷಣೆ : 4ನೇ ಬಾರಿಗೆ ಒಂದಾದ ಭಜರಂಗಿ ಕಾಂಬೋ..!

1 min read

ಶಿವಣ್ಣನ 125ನೇ ಸಿನಿಮಾ ಘೋಷಣೆ : 4ನೇ ಬಾರಿಗೆ ಒಂದಾದ ಭಜರಂಗಿ ಕಾಂಬೋ..!

ಸ್ಯಾಂಡಲ್ ವುಡ್ ನ ಬುನಿರೀಕ್ಷೆಯ ಭಜರಂಗಿ 2 ಸಿನಿಮಾದಲ್ಲಿ ಬ್ಯುಸಿಯಾಗಿರುವ ಹ್ಯಾಟ್ರಿಕ್ ಹೀರೋ #Shivarajkumar ಅವರು ಇದೀಗ ತಮ್ಮ 125ನೇ ಸಿನಿಮಾಗೆ ಸಜ್ಜಾಗ್ತಿದ್ದಾರೆ. ಈಗಾಗಲೇ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರು 124 ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನ ರಂಜಿಸಿದ್ದಾರೆ. ಇದೀಗ ಇಂದು @Mahashivarathri ಹಬ್ಬದ ಪ್ರಯುಕ್ತ  ಶಿವಣ್ಣ ಅವರ 125ನೇ ಸಿನಿಮಾ ಅನೌನ್ಸ್ ಮಾಡಲಾಗಿದೆ. ಶಿವರಾಜ್ ಕುಮಾರ್ ಅವರ  ಪೋಸ್ಟರ್ ಹಾಗೂ ಟೈಟಲ್  ರಿವೀಲ್ ಆಗಿದೆ.

ದರ್ಶನ್ ಸಿನಿಮಾ `ರಾ’BUT : ಬಿಲ್ಡಪ್ ಇಲ್ಲದ ರಾಬರ್ಟ್ ರಿವ್ಯೂವ್

ಶಿವರಾಜ್ ಕುಮಾರ್ ಅವರ 125ನೇ ಸಿನಿಮಾಗೆ ಎ ಹರ್ಷ ಅವರು ಆಕ್ಷನ್ ಕಟ್ ಹೇಳ್ತಿರುವುದು ವಿಶೇಷ. ಈ ಮೂಲಕ ಹರ್ಷ ಮತ್ತು ಶಿವಣ್ಣ 4ನೇ ಬಾರಿಗೆ ಮತ್ತೆ ಒಂದಾಗುತ್ತಿದ್ದಾರೆ. ಹೌದು ಈಗಾಗಲೇ ಭಜರಂಗಿ, ವಜ್ರಕಾಯ ಮೂಲಕ ಪ್ರೇಕ್ಷೆರನ್ನ ಮೋಡಿ ಮಾಡಿರುವ ಈ ಕಾಂಬೋ ಭಜರಂಗಿ-2 ನಲ್ಲೂ ಒಟ್ಟಾಗಿ ಕೆಲಸ ಮಾಡಿರುವ ವಿಚಾರ ಎಲ್ರಿಗೂ ಗೊತ್ತೇ ಇದೆ. ಇದೀಗ ಮತ್ತೊಮ್ಮೆ ಈ ಸೂಪರ್ ಜೋಡಿ ಒಂದಾಗ್ತಿದ್ದು, ಫ್ಯಾನ್ಸ್ ಗಳು ಸಖತ್ ಎಕ್ಸೈಟ್ ಆಗಿದ್ದಾರೆ. @bhajarangi2 #bhajarangi2

‘ಚಾರ್ಲಿ’ ಬಿಟ್ಟು  ‘ಸಪ್ತ ಸಾಗರದಾಚೆಗೆ ಎಲ್ಲೋ’ ಹೊರಟಿದ್ದಾರೆ ರಕ್ಷಿತ್..!

ಅಂದಹಾಗೆ ಶಿವಣ್ಣನ 125ನೇ ಸಿನಿಮಾಗೆ ‘ವೇದ’ ಎಂದು ಟೈಟಲ್ ಇಡಲಾಗಿದೆ. ಟೈಟಲ್ ಜೊತೆಗೆ ಬ್ರೂಟಲ್ 1960 ಎನ್ನುವ ಟ್ಯಾಗ್ ಲೈನ್ ಕೂಡ ಇದ್ದು, ಪಕ್ಕಾ ಇದೊಂದು  ರೆಟ್ರೋ ಶೈಲಿಯ ಸಿನಿಮಾ ಆಗಿರಬಹುದು ಎಂದೇ ಹೇಳಲಾಗ್ತಿದೆ. ಇನ್ನೂ ಪೋಸ್ಟರ್ ನಲ್ಲಿ ಶಿವಣ್ಣ  ಒಂದು ವಿಭಿನ್ನ  ಗೆಟಪ್ ನಲ್ಲಿ ವಯಸ್ಸಾದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದ ದಾಡಿ ಮತ್ತು ಕೂದಲು ಬಿಟ್ಟಿರುವ ಶಿವಣ್ಣನ ಲುಕ್ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಇನ್ನೂ ಶಿವರಾಜ್ ಕುಮಾರ್ ಹೋಮ್ ಬ್ಯಾನರ್ ಗೀತಾ ಪಿಕ್ಚರ್‌ ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಅಲ್ಲದೇ ಗೀತಾ ಪಿಕ್ಚರ್‌ ನಲ್ಲಿ  ಮೂಡಿಬರುತ್ತಿರುವ ಮೊದಲ ಸಿನಿಮಾವೂ ಕೂಡ ಇದೇ  ಆಗಿರೋದು ವಿಶೇಷ.

ಬಿಡುಗಡೆ ಭಾಗ್ಯ ಸಿಕ್ರೂ ರಾಗಿಣಿ, ಸಂಜಾನಗೆ ವನವಾಸ ತಪ್ಪಿದ್ದಲ್ಲ..! #sandalwood #drugmafia #mastan

ಪಾಕಿಸ್ತಾನದಲ್ಲೂ ಬಿಜೆಪಿ ಸರ್ಕಾರ ಬರಲಿದೆ : ಕಂಗನಾ ರಣೌತ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd