ಬಿಡುಗಡೆ ಭಾಗ್ಯ ಸಿಕ್ರೂ ರಾಗಿಣಿ, ಸಂಜಾನಗೆ ವನವಾಸ ತಪ್ಪಿದ್ದಲ್ಲ..! #sandalwood #drugmafia #mastan

1 min read

ಬಿಡುಗಡೆ ಭಾಗ್ಯ ಸಿಕ್ರೂ ರಾಗಿಣಿ, ಸಂಜಾನಗೆ ವನವಾಸ ತಪ್ಪಿದ್ದಲ್ಲ..! #sandalwood #drugmafia #mastan

ಸ್ಯಾಂಡಲ್ ಡ್ರಗ್ ಕೇಸ್ ನಲ್ಲಿ ಸಿಲುಕಿದ್ದ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಜಾಮೀನಿನ ಮೇಲೆ ರಿಲೀಸ್ ಆಗಿ ಆಚೆ ಬಂದ್ರೂ ಸಂಕಷ್ಟಗಳು ತಪ್ಪಿದ್ದಂತೆ ಕಾಣ್ತಿಲ್ಲ. ಪ್ರಕರಣದ A

 ಆರೋಪಿಯಾಗಿದ್ದ ರಾಗಿಣಿ  145 ದಿನಗಳ ಕಾಲ ಸೆರೆವಾಸ ಅನುಭವಿಸಿದ್ರೆ, ಇತ್ತ ಸಂಜನಾ ಪ್ರಕರಣ A14 ಆರೋಪಿ 84 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ವನವಾಸ ಅನುಭವಿಸಿ ಇದೀಗ ಜೈಲಿನಿಂದ ರಿಲೀಸ್ ಆಗಿ ಕೆರಿಯರ್ ಕಡೆ ಫೋಕಸ್ ಮಾಡ್ತಿದ್ದಾರೆ.

ಆದ್ರೆ ಇತ್ತೀಚೆಗೆ ಡ್ರಗ್ ಡೀಲಿಂಗ್ ಕೇಸ್ ನಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಮಸ್ತಾನ್ ಹೆಸರು ಕೇಳಿಬಂದಿದ್ದು, ಆತನನ್ನ ವಿಚಾರಣೆಗೊಳಪಡಿಸಲಾಗಿದೆ. ಆದ್ರೆ ಈ ಮಸ್ತಾನ್ ಜೊತೆಗೆ ಸಂಜನಾ ಹಾಗೂ ರಾಗಿಣಿ ಇಬ್ಬರೂ ಸಹ ನಿಕಟ ಸಂಪರ್ಕ ಹೊಂದಿದ್ದರು ಎಂಬ ವಿಚಾರ ತಿಳಿದುಬಂದಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ : ಡ್ರಗ್ ಡೀಲಿಂಗ್ ಗಾಗಿ ‘ಒನ್ ಲವ್’..! ಏನಿದು?  

ಅಲ್ದೇ ನಿರ್ಮಾಪಕ ಶಂಕರೇಗೌಡ ಹೆಸರು ಸಹ ಡ್ರಗ್ ಮಾಫಿಯಾದಲ್ಲಿ ಕೇಳಿ ಬರುತ್ತಿದ್ದು, ಮಸ್ತಾನ್ ಹಾಗೂ ಶಂಕರೇಗೌಡ  ಆಯೋಜನೆ ಮಾಡ್ತಿದ್ದ ಪಾರ್ಟಿಗಳಲ್ಲಿ ಡ್ರಗ್ಸ್ ಸಪ್ಲೈ ಆಗ್ತಿತ್ತು ಎನ್ನಲಾಗ್ತಿದೆ. ಇದೇ ಪಾರ್ಟಿಗಳಲ್ಲಿ ರಾಗಿಣಿ ಸಂಜನಾ ಸಹ ಭಾಗಿಯಾಗ್ತಿದ್ದ ವಿಚಾರ ಗೊತ್ತಾಗಿದೆ.

ಅಷ್ಟೇ ಅಲ್ದೇ ವಿಚಾರಣೆ ವೇಲೆ ಮಸ್ತಾನ್ ಅನೇಕ ನಟಿಯರು ಹೆಸರನ್ನ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಇದೀಗ ಮತ್ತೆ ಡ್ರಗ್ ಪೆಡ್ಲಿಂಗ್ ಅನುಮಾನದಡಿ ಸಂಜನಾ, ರಾಗಿಣಿ  ಜೊತೆ ಇನ್ನೂ ಹಲವು ನಟ ನಟಿಯರಿಗೆ ನೋಟಿಸ್ ಕೊಡಲು ಗೋವಿಂದಪುರ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.. ಈ ಪ್ರಕರಣ ಸಂಬಂಧ ಮಸ್ತಾನ್ ಮೊಬೈಲ್ ರಿ ಟ್ರೀವಲ್ ಮಾಡಿ ಎಲ್ಲಾ ಮಾಹಿತಿಗಳನ್ನ ಪೊಲೀಸರು ಕಲೆ ಹಾಕಿದ್ದು, ಮಸ್ತಾನ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಭಾಗಿಯಾಗ್ತಿದ್ದ ಹಲವರನ್ನ ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd