ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ : ಡ್ರಗ್ ಡೀಲಿಂಗ್ ಗಾಗಿ ‘ಒನ್ ಲವ್’..! ಏನಿದು?
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣ್ತಿಲ್ಲ. ದಿನೇ ದಿನೇ ಹೊಸ ಹೊಸ ವಿಚಾರಗಳು ಪ್ರಕರಣದಲ್ಲಿ ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಡ್ರಗ್ ಡೀಲಿಂಗ್ ನಲ್ಲಿ ಮಸ್ತಾನ್ ವಿಚಾರಣೆಗೊಳಪಡಿಸಿದ ಬೆನ್ನಲ್ಲೇ ಮತ್ತಷ್ಟು ಮಾಹಿತಿಗಳು ಸಿಕ್ಕಿವೆ.
ಮಸ್ತಾನ್ ಡ್ರಗ್ ಖರೀದಿ ಮತ್ತೆ ಸಪ್ಲೈಗೆ ‘ಒನ್ ಲವ್’ ಎಂಬ ಪಾಸ್ ವರ್ಡ್ ಬಳಸುತ್ತಿದ್ದ. ಡ್ರಗ್ ಪೆಡ್ಲರ್ ಗಳಾದ ಫಯೂಮ್ ಹಾಗೂ ಜಾನ್ ಇಬ್ಬರು ಮಸ್ತಾನ್ ಗೆ ಡ್ರಗ್ ಪೆಡ್ಲಿಂಗ್ ಮಾಡ್ತಿದ್ರು. ಡ್ರಗ್ ಡೀಲಿಂಗ್ ವೇಳೆ ಈ ಪಾಸ್ ವರ್ಡ್ ಬಳಕೆಯಾಗ್ತಿತ್ತು. ಪೆಡ್ಲರ್ ಫಯೂಮ್ ಕಾಶ್ಮೀರದಿಂದ ಬೆಂಗಳೂರಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ. ನೈಜೀರಿಯನ್ ಪೆಡ್ಲರ್ ಜಾನ್ ವಿದೇಶಿ ಪ್ರಜೆಗಳಿಂದ ಬೆಂಗಳೂರಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡ್ತಿದ್ದ. ಇನ್ನೂ ನಿರ್ಮಾಪಕ ಶಂಕರೇಗೌಡ ಬೆಂಗಳೂರಲ್ಲಿ ಪಾರ್ಟಿ ಆಯೋಜನೆ ಮಾಡ್ತಿದ್ದ. ಈ ಪಾರ್ಟಿಗಳಲ್ಲಿ ಮಸ್ತಾನ್ ಡ್ರಗ್ ಸಪ್ಲೈ ಮಾಡ್ತಿದ್ದ ಎನ್ನಲಾಗಿದೆ.
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಶುಭಕೋರಿದ ರಾಜಕೀಯ ಗಣ್ಯರು..!
ಇನ್ನೂ ಸಂಜಯನಗರದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬಹುತೇಕ ಪಾರ್ಟಿಗಳು ಆಯೋಜನೆಯಾಗುತ್ತಿದ್ದವು ಎಂಬ ವಿಚಾರವೂ ಗೊತ್ತಾಗಿದೆ. ಅದರಲ್ಲೂ ಸಿನಿಮಾ ಚರ್ಚೆಯ ಹೆಸರಲ್ಲಿ ಲೇಟ್ ನೈಟ್ ಪಾರ್ಟಿಗಳನ್ನ ನಡೆಸಲಾಗ್ತಿತ್ತು. ಈ ಪಾರ್ಟಿಗಳಲ್ಲಿ ಡ್ರಗ್ಸ್ ಸಪ್ಲೈ ಆಗ್ತಿತ್ತು. ಇಂತಹ ಪಾರ್ಟಿಗಳಿಗೆ ಡ್ರಗ್ಸ್ ರಿಸೀವ್ ಮಾಡಿಕೊಳ್ಳಲು ಪಾಸ್ ವರ್ಡ್ ಫಿಕ್ಸ್ ಆಗಿತ್ತು. ಅದೇ ‘ಒನ್ ಲವ್’ ಎನ್ನಲಾಗಿದೆ. ಇನ್ನೂ ಜಾನ್ ಹಾಗೂ ಫಯೂಮ್ ರಿಂದ ಬೆಂಗಳೂರಲ್ಲಿ ಮಸ್ತಾನ್ ಡ್ರಗ್ಸ್ ರಿಸೀವ್ ಮಾಡಿಕೊಳ್ತಿದ್ದ.
ಅಧಿಕಾರ ಉಂಡು ಬೆನ್ನಿಗೆ ಚೂರಿ ಹಾಕುವುದು ಹೊಸದೇನಲ್ಲ : ಹೆಚ್ ಡಿ ಕೆ
ದೇವೇಗೌಡರು ನಂಬಿದವರೇ ಅವರ ಬೆನ್ನಿಗೆ ಚಾಕು ಹಾಕಿದ್ದಾರೆ : ಕುಮಾರಸ್ವಾಮಿ..!