ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಶುಭಕೋರಿದ ರಾಜಕೀಯ ಗಣ್ಯರು..!

1 min read
Saakshatv astrology mahashivaratri vrutha

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಶುಭಕೋರಿದ ರಾಜಕೀಯ ಗಣ್ಯರು..!

ಇಂದು ರಾಜ್ಯ ಹಾಗೂ ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಯಿಂದ ಮಹಾಶಿವರಾತ್ರಿ ಹಬ್ಬವನ್ನ ಆಚರಣೆ ಮಾಡಲಾಗ್ತಿದೆ. ಶಿವನ ದೇವಾಲಯಗಳು ಭಕ್ತರಿಂದ ತುಂಬಿಹೋಗಿದೆ. ಇನ್ನೂ ರಾಜ್ಯ ಗಣ್ಯರು ಹಾಗೂ ರಾಜಕೀಯ ಮುಖಂಡರು ನಾಡಿನ  ಸಮಸ್ತ ಜನರಿಗೆ ಶಿವರಾತ್ರಿಯ ಶುಭಾಷಯಗಳನ್ನ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪ  

‘ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ಸಂಕಷ್ಟ, ನೋವು, ರೋಗಗಳಿಂದ ಜಗತ್ತನ್ನು ಪಾರುಮಾಡಿ, ಆ ಪರಮೇಶ್ವರನು ಸರ್ವರಿಗೂ ಮಂಗಳವನ್ನು, ಆರೋಗ್ಯವನ್ನು ಮತ್ತು ಸುಖವನ್ನು ಕರುಣಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸೋಣ’ ಎಂದು ಟ್ವೀಟ್ ಮಾಡಿ ಶುಭಹಾರೈಸಿದ್ದಾರೆ.b. s yadiyurappa saaksha tv.com

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

‘ವಿಶ್ವದ ಸಕಲವೂ ಆಗಿರುವ ಶಿವನ ಆರಾಧನೆಯ ದಿನವಾದ ಈ ದಿನ ಎಲ್ಲರಿಗೂ ಶುಭಾಶಯ ಕೋರುತ್ತೇನೆ. ವಿಶ್ವದ ಹಿತಕ್ಕಾಗಿ ನಂಜನ್ನೇ ಉಂಡ ನಂಜುಂಡನ ಆಶಿರ್ವಾದ ಎಲ್ಲರಿಗೂ ಸಿಗಲಿ ಎಂದು ನಾನು ಈ ಸಂದರ್ಭದಲ್ಲಿ ಆಶಿಸುತ್ತೇನೆ’ ಎಂದಿದ್ದಾರೆ.kumaraswami saaksha tv.com

ಮಾಜಿ ಸಿಎಂ ಸಿದ್ದರಾಮಯ್ಯ

‘ಮಂಗಳಕರವಾದ ಮಹಾ ಶಿವರಾತ್ರಿಯು ಜನರ ಸಂಕಷ್ಟಗಳನ್ನು ಕಳೆದು ಕಲ್ಯಾಣವನ್ನುಂಟು ಮಾಡಲಿ. ಕಲ್ಯಾಣವೆಂಬುದು ಬಸವನಿಳೆಯ ಬೆಳೆಯಾಗಲಿ. ನಾಡ ಬಾಂಧವರಿಗೆ ಮಹಾ ಶಿವರಾತ್ರಿಯ ಶುಭಹಾರೈಕೆಗಳು’ ಎಂದಿದ್ದಾರೆ.

siddaramaih saaksha tv.com

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

‘ಶಿವ ಸರಳತೆ, ಪ್ರಾಮಾಣಿಕತೆ, ನಿಷ್ಕಲ್ಮಶ ಮನಸ್ಸಿನ ಪ್ರತೀಕವಾಗಿದ್ದು, ಎಲ್ಲಾ ಆಡಂಬರಗಳಿಂದ ಮುಕ್ತವಾಗಿರುವ ಅಮೋಘ ಶಕ್ತಿ ಸ್ವರೂಪಿಯಾಗಿದ್ದು, ಈ ಮಹಾ ಶಿವರಾತ್ರಿಯಂದು ಎಲ್ಲರಿಗೂ ಶಿವನ ಆಶೀರ್ವಾದ ದೊರಕಲಿ. ಸರ್ವರಿಗೂ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು’ ಎಂದು ತಿಳಿಸಿದ್ದಾರೆ.

hd devegowda saaksha tv.com

ಮಾಜಿ ಸಚಿವ ರಾಮಲಿಂಗಾರೆಡ್ಡಿ

‘ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. ಮೃತ್ಯುಂಜಯ ಎಂದೇ ಕರೆಸಿಕೊಳ್ಳುವ ಶಿವ ಜಗತ್ತಿನ ಪ್ರತಿ ಜೀವಿಯ ಬದುಕಿಗೆ ಅಂತ್ಯ ನೀಡುವವನು. ಭಾರತೀಯ ಪುರಾಣಗಳು ಶಿವನನ್ನು ಅರ್ಧನಾರೀಶ್ವರನಾಗಿ ಕಂಡು ಸ್ತ್ರೀ ಶಕ್ತಿಯ ಮಹತ್ವ ಸಾರುತ್ತದೆ.  ಈ ಮಹಾಶಿವರಾತ್ರಿ ನಾಡಿನ ಜನರ ಬಾಳಲ್ಲಿ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

ಸಂಸದೆ ಸುಮಲತಾ

‘ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ… ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು. ನಮ್ಮೆಲ್ಲರಿಗೂ ಆ ಭಗವಂತ ಸನ್ಮಂಗಳವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ .

ಸಂಸದ ಬಿವೈ ರಾಘವೇಂದ್ರ

ಓಂಕಾರಂ ಬಿಂದುಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ|| ||ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ||. ಶಿವನನ್ನು ಭಕ್ತಿಯಿಂದ ಸಂಭ್ರಮದಿಂದ ಆರಾಧಿಸೋಣ , ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಗಳು ಎಂದು ಶುಭಕೋರಿದ್ದಾರೆ.

ಸಚಿವ ಜಗದೀಶ್ ಶೆಟ್ಟರ್

‘ಓಂ ನಮೋ ಭಗವತೇ ರುದ್ರಾಯ! ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು’ ಎಂದು ಶುಭಕೋರಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ

‘ಸರ್ವರಿಗೂ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು’ ಎಂದಿದ್ದಾರೆ.

ಬಿಜೆಪಿ ನಾಯಕ ಹಾಗೂ ನಟ ಜಗ್ಗೇಶ್

ಅಧಿಕಾರ ಉಂಡು ಬೆನ್ನಿಗೆ ಚೂರಿ ಹಾಕುವುದು ಹೊಸದೇನಲ್ಲ : ಹೆಚ್ ಡಿ ಕೆ

ದೇವೇಗೌಡರು ನಂಬಿದವರೇ ಅವರ ಬೆನ್ನಿಗೆ ಚಾಕು ಹಾಕಿದ್ದಾರೆ : ಕುಮಾರಸ್ವಾಮಿ..!

ಕುಕ್ಕೆ ಸುಬ್ರಮಣ್ಯದಲ್ಲಿ ಹಿಂದಿನ ಸಂಪ್ರದಾಯದಂತೆ ಮಹಾಶಿವರಾತ್ರಿ ಆಚರಣೆ : ಹೈಕೋರ್ಟ್‌..!

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd