‘ಚಾರ್ಲಿ’ ಬಿಟ್ಟು  ‘ಸಪ್ತ ಸಾಗರದಾಚೆಗೆ ಎಲ್ಲೋ’ ಹೊರಟಿದ್ದಾರೆ ರಕ್ಷಿತ್..!

1 min read
saptha sagaradachege ello saaksha tv.com

‘ಚಾರ್ಲಿ’ ಬಿಟ್ಟು  ‘ಸಪ್ತ ಸಾಗರದಾಚೆಗೆ ಎಲ್ಲೋ’ ಹೊರಟಿದ್ದಾರೆ ರಕ್ಷಿತ್..!

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಇತ್ತೀಚೆಗಷ್ಟೇ ‘777 ಚಾರ್ಲಿ’ ಸಿನಿಮಾದ ಶೂಟಿಂಗ್ ಮುಗಿಸಿದ್ದರು. ಇದೀಗ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಎಂಬ ವಿಭಿನ್ನ ಟೈಟಲ್ ನಿಂದ ಶೂಟಿಂಗ್ ಆರಂಭವಾಗುವುದಕ್ಕೂ ಮುಂಚಿನಿಂದಲೇ ಸಖತ್ ಗಮನ ಸೆಳೆಯುತ್ತಿದೆ ಈ ಸಿನಮಾ.saptha sagaradachege ello saaksha tv.com

ಬಿಡುಗಡೆ ಭಾಗ್ಯ ಸಿಕ್ರೂ ರಾಗಿಣಿ, ಸಂಜಾನಗೆ ವನವಾಸ ತಪ್ಪಿದ್ದಲ್ಲ..!

ಅಂದ್ಹಾಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಪೋಸ್ಟರ್ ಅನ್ನ ಸಿನಿಮಾ ತಂಡ ರಿಲೀಸ್ ಮಾಡುವ ಮೂಲಕ ರಕ್ಷಿತ್ ಫ್ಯಾನ್ಸ್ ಗೆ ಗಿಫ್ಟ್ ನೀಡಿದೆ. ಇದ್ರಲ್ಲಿ ರಕ್ಷಿತ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಕೂದಲು ಮತ್ತು ದಾಡಿ ಬಿಟ್ಟ ಈ ಪೋಸ್ಟರ್ ಮೊದಲನೆಯದಾಗಿ ಟೈಟಲ್ ಸಿಕ್ಕಾಪಟ್ಟೆ ಸ್ಯೂಟ್ ಆಗ್ತಿದೆ. 2ನೇಯದಾಗಿ  ನೋವಿನಲ್ಲಿರುವ ರಕ್ಷಿತ್ ಲುಕ್ ನೋಡಿದ ಅಭಿಮಾನಿಗಳು ಸಿನಿಮಾ ಕಥೆ ಯಾವ ಥರ ಇರಬಹುದು ಎಂದು ಊಹೆ ಮಾಡಿಕೊಳ್ತಿದ್ದಾರೆ.

ಅಂದ್ಹಾಗೆ ಪರಂವಃ ಪಿಕ್ಚರ್ಸ್ ನಲ್ಲಿ ಸಿನಿಮಾ ಮೂಡಿಬರುತ್ತಿರುವ ಸಿನಿಮಾಗೆ ಹೇಮಂತ್ ರಾವ್ ಅವರು ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಚಿತ್ರದಲ್ಲಿ ರಕ್ಷಿತ್ ಗೆ ನಾಯಕಿಯಾಗಿ ಬೀರ್ ಬಲ್ ಸಿನಿಮಾ ಖ್ಯಾತಿಯ ರುಕ್ಮಿನಿ ವಸಂತ್ ಬಣ್ಣ ಹಚ್ಚುತ್ತಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ : ಡ್ರಗ್ ಡೀಲಿಂಗ್ ಗಾಗಿ ‘ಒನ್ ಲವ್’..! ಏನಿದು?  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd