Madhya Pradesh: ಗುಡಿಸಿಲಿಗೆ ಬೆಂಕಿ ಬಿದ್ದು ಸುಟ್ಟ ಕರಕಲಾದ ವೃದ್ಧ ದಂಪತಿಗಳು…
ಗುಡಿಸಿಲಿಗೆ ಬೆಂಕಿ ಬಿದ್ದು ವೃದ್ಧ ದಂಪತಿ ಸುಟ್ಟು ಕರಕಲಾಗಿರುವ ಘಟನೆ ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಬಂಖೇಡಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾರ್ಕಲಿ ಗ್ರಾಮದಲ್ಲಿ ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯಲ್ಲಿ ಸಂತ್ರಸ್ತರು ಮಲಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬರ್ಖೇಡಿ ಪೊಲೀಸ್ ಠಾಣೆ ಪ್ರಭಾರಿ ಶ್ರೀನಾಥ್ ಝರವಾಡೆ ಮಾತನಾಡಿ, “ಮಧ್ಯರಾತ್ರಿಯ ನಂತರ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ ಕೆಲವು ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು” ಎಂದು ಹೇಳಿದರು.
ಬೆಂಕಿಯನ್ನ ನಂದಿಸಿದ ನಂತರ, 65 ವರ್ಷದ ವ್ಯಕ್ತಿ ಮತ್ತು ಅವರ 62 ವರ್ಷದ ಪತ್ನಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ನಡೆಸುತ್ತಿರುವುದಾಗು ತಿಳಿಸಿದ್ದಾರೆ.
Madhya Pradesh: Elderly couple burnt to death after their hut catches fire