Madhya Pradesh: ಡಿಸೆಂಬರ್ 20 ರಿಂದ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದ ಆವರಣದಲ್ಲಿ ಮೊಬೈಲ್ ನಿಷೇಧ…
ಮಧ್ಯಪ್ರದೇಶದ ಉಜ್ಜಯಿನಿ ನಗರದ ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯದ ಆವರಣಕ್ಕೆ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಭದ್ರತೆಯ ಕಾರಣವೊಡ್ಡಿ ಡಿಸೆಂಬರ್ 20 ರಿಂದ ಮೊಬೈಲ್ ಪೋನ್ ನಿಷೇಧಿಸಲಾಗಿದೆ ಎಂದು ಜಿಲ್ಲೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ನಂತರ, ಭದ್ರತಾ ಕಾರಣಗಳಿಗಾಗಿ ಡಿಸೆಂಬರ್ 20 ರಿಂದ ದೇವಸ್ಥಾನದೊಳಗೆ ಮೊಬೈಲ್ ಫೋನ್ಗಳನ್ನು ನಿಷೇಧಿಸಲಾಗುವುದು ಎಂದು ಸಿಂಗ್ ತಿಳಿಸಿದರು.
ಭಕ್ತಾದಿಗಳು ಮೊಬೈಲ್ ಫೋನ್ ಇಲ್ಲದೆ ದೇವಸ್ಥಾನಕ್ಕೆ ಆಗಮಿಸುವಂತೆ ಈ ಮಾಹಿತಿಯನ್ನ ತಿಳಿಸುವಂತೆ ಹೋಟೆಲ್ ಮತ್ತು ಇತರ ವಸತಿ ಸ್ಥಳಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಮಹಾಕಾಳೇಶ್ವರ ದೇವಾಲಯವು ದೇಶದ 12 ‘ಜ್ಯೋತಿರ್ಲಿಂಗ’ಗಳಲ್ಲಿ ಒಂದಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರನ್ನ ಆಕರ್ಷಿಸುತ್ತದೆ.
ದೇವಾಲಯದ ವ್ಯವಸ್ಥಾಪನಾ ಸಮಿತಿಯು ಇನ್ನೂ ಹಲವು ನಿರ್ಧಾರಗಳನ್ನ ತೆಗೆದುಕೊಂಡಿದ್ದು, ಪ್ರವಾಸಿಗರಿಗಾಗಿ ನಗರದಲ್ಲಿ ಐಷಾರಾಮಿ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಭಕ್ತಾದಿಗಳಿಗೆ ಸಹಾಯ ಮಾಡಲು 50 ಸಮಾನಾಂತರ ದೂರವಾಣಿ ಮಾರ್ಗಗಳೊಂದಿಗೆ ಕಾಲ್ ಸೆಂಟರ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
Madhya Pradesh: Mobile ban on Ujjain Mahakaleshwar temple premises from December 20…