ಮನೆಗೆ ನುಗ್ಗಲು ಯತ್ನಿಸಿದ ಕಾಡಾನೆ

1 min read
Madikeri saaksha tv

ಮನೆಗೆ ನುಗ್ಗಲು ಯತ್ನಿಸಿದ ಕಾಡಾನೆ Madikeri saaksha tv

ಮಡಿಕೇರಿ : ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಂಚಳ್ಳಿ ಗ್ರಾಮದಲ್ಲಿ ಕಾಡಾನೆಯೊಂದು ಮನೆಗೆ ನುಗ್ಗುಲು ಯತ್ನಿಸಿದ್ದು, ಇದರ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಕಾಡಾನೆಯೊಂದು ಮಂಚಳ್ಳಿ ಗ್ರಾಮದ ಸೋಮಯ್ಯ ಎಂಬುವರ ಮನೆಗೆ ಮನೆಗೆ ನುಗ್ಗಲು ಯತ್ನಿಸಲು ವಿಫಲ ಯತ್ನ ಮಾಡಿದೆ.

Madikeri saaksha tv

ಸೋಮಯ್ಯ ಅವರ ಮನೆಯ ಹಿಂಬದಿ ಬಾಗಿಲನ್ನು ಕಾಡಾನೆ ಎರಡು ಮೂರು ಬಾರಿ ತಳ್ಳಿದೆ.

ಆದ್ರೆ ಬಾಗಿಲು ತೆರೆದುಕೊಳ್ಳದ ಕಾರಣ ಕಾಡಾನೆ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಈ ಎಲ್ಲಾ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd