ಕೋತಿಗಳ ಸೇಡಿನ ಕಹಾನಿಗೆ 250 ನಾಯಿ ಮರಿಗಳ ಸಾವು…..
ಗ್ಯಾಂಗ್ ವಾರ್ ಕೇವಲ ಮನುಷ್ಯರಲ್ಲಿ ಅಷ್ಟೇ ಅಲ್ಲ ಪ್ರಾಣಿಗಳಲ್ಲೂ ಕಂಡುಬರುತ್ತೆ. ಕೋತಿಗಳ ಗುಂಪೊಂದು ಸೇಡುತೀರಿಸಿಕೊಳ್ಳಲು 250 ನಾಯಿಗಳನ್ನು ಕಟ್ಟಡಗಳು ಮತ್ತು ಮರದ ತುದಿಗಳಿಂದ ಕೆಳಗೆ ಬೀಳಿಸಿ ಕೊಂದಿರುವ ಘಟನೆ ಮಹಾರಾಷ್ಟ್ರ ರಾಜ್ಯದ ಬೀಡ್ ಜಿಲ್ಲೆಯಲ್ಲಿ ನಡೆದಿದೆ. ಅದ್ರಲ್ಲೂ ಮಂಗನಿಂದ ಮಾನವ ಅಂದ್ಮೇಲೆ ಮನುಷ್ಯನ ಕೋಪಾ ತಾಪ ಕೋತಿಗಳಲ್ಲೂ ಇರೋದು ಕಾಮನ್ ಬಿಡಿ.
ರಾಜ್ಯ ರಾಜಧಾನಿ ಮುಂಬೈನಿಂದ 300 ಮೈಲುಗಳಷ್ಟು ದೂರದಲ್ಲಿರುವ ಮಜಲ್ಗಾಂವ್ನಲ್ಲಿ ಹಳ್ಳಿಗಾಡಿನಲ್ಲಿ ಈ ದಿಗ್ಭ್ರಮೆಗೊಳಿಸುವ ಘಟನೆ ನಡೆದಿದೆ. ಸ್ಥಳೀಯ ವರದಿಗಳ ಪ್ರಕಾರ, ಕೆಲವು ನಾಯಿಗಳು ಶಿಶು ಕೋತಿಯನ್ನ ಕಚ್ಚಿ ಕೊಂದಿವೆ ಇದರ ನಂತರ ಕೊಲ್ಲುವ ಸರಮಾಲೆ ಪ್ರಾರಂಭವಾಯಿತು. ಅಂದಿನಿಂದ, ಸೇಡಿನ ಬೆಂಕಿಯಿಂದ ದಹಿಸಲ್ಪಟ್ಟ ಕೋತಿಗಳು ನಾಯಿಮರಿಗಳನ್ನು ಹಿಡಿದು ಕಟ್ಟಡ ಮತ್ತು ಮರಗಳಿಂದ ದಯನೀಯವಾಗಿ ನಾಯಿ ಮರಿಯನ್ನ ಬೀಳಿಸಿ ಸಾಯಿಸಿವೆ.
ಗ್ರಾಮಸ್ಥರ ಪ್ರಕಾರ, ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು 250 ನಾಯಿಗಳನ್ನು ಕೊಲ್ಲಲ್ಪಟ್ಟಿವೆ. ಮಜಲಗಾಂವ್‌ನಿಂದ 10 ಕಿಲೋಮೀಟರ್ ದೂರದಲ್ಲಿರುವ ಲಾವೂಲ್‌ನಲ್ಲಿ ಒಂದು ನಾಯಿ ಮರಿ ಉಳಿದಿಲ್ಲ. ಮಂಗಗಳ ಹಾವಳಿ ವಿರುದ್ಧ ಗ್ರಾಮದ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೂ ಒಂದೇ ಒಂದು ಕೋತಿಯನ್ನು ಹಿಡಿಯಲು ಸಾಧ್ಯವಾಗಿಲ್ಲ.