ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ – ಮುಂಬೈ ತೊರೆದು ಬೆಂಗಳೂರಿಗೆ ಹಾರಿದ ದೀಪಿಕಾ – ರಣವೀರ್ ಜೋಡಿ

1 min read
Deepika Padukone

ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ – ಮುಂಬೈ ತೊರೆದು ಬೆಂಗಳೂರಿಗೆ ಹಾರಿದ ದೀಪಿಕಾ – ರಣವೀರ್ ಜೋಡಿ

ಮಹಾರಾಷ್ಟ್ರದಲ್ಲಿ ಕರ್ಫ್ಯೂ ಹೇರಿರುವ ಹಿನ್ನೆಲೆಯಲ್ಲಿ, ಬಾಲಿವುಡ್‌ನ ಸ್ಟಾರ್ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಮುಂಬೈ ತೊರೆದು ಬೆಂಗಳೂರಿಗೆ ಹಾರಿದ್ದಾರೆ. ಈ ಜೋಡಿ ಮುಂದಿನ ಕೆಲವು ದಿನಗಳನ್ನು ದೀಪಿಕಾ ಅವರ ತವರೂರಾದ ಬೆಂಗಳೂರಿನಲ್ಲಿ ಕಳೆಯಲು ನಿರ್ಧರಿಸಿದೆ ಎಂದು ವರದಿಯಾಗಿದೆ.
Deepika Padukone

ವರದಿಯ ಪ್ರಕಾರ, ದೀಪಿಕಾ ಅವರ ಪೋಷಕರಾದ ಪ್ರಕಾಶ್ ಮತ್ತು ಉಜ್ಜಲಾ ಪಡುಕೋಣೆ ಅವರೊಂದಿಗೆ ಕೆಲವು ಸಮಯವನ್ನು ಕಳೆಯಲು ದಂಪತಿಗಳು ಬೆಂಗಳೂರಿಗೆ ಹಾರಿದ್ದಾರೆ. ದೀಪಿಕಾ ಪತಿ ರಣವೀರ್ ಸಿಂಗ್ ಜೊತೆ ಬೆಂಗಳೂರಿನ ಕೋರಮಂಗಲದಲ್ಲಿ ನೆಲೆಸಿರುವ ತಂದೆ ಪ್ರಕಾಶ್ ಪಡುಕೋಣೆ, ತಾಯಿ ಉಜಾಲರ ಮನೆಗೆ ಆಗಮಿಸಿದ್ದಾರೆ.

ಬೆಂಗಳೂರಿನಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದ್ದರೂ, ನಿರ್ಬಂಧವು ಅಷ್ಟೊಂದು ತೀವ್ರವಾಗಿಲ್ಲ. ಏಪ್ರಿಲ್ 20 ರವರೆಗೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.

ಏತನ್ಮಧ್ಯೆ, ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದ್ದು ರಾಜ್ಯಾದ್ಯಂತ ಕಟ್ಟುನಿಟ್ಟಿನ ಕರ್ಪ್ಯೂ ಹೇರಲಾಗಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಮುಂದಿನ ಎರಡು ವಾರಗಳವರೆಗೆ ರಾಜ್ಯದಲ್ಲಿ ಯಾವುದೇ ಚಟುವಟಿಕೆಗಳಿಗೆ ಅನುಮತಿಸಲಾಗುವುದಿಲ್ಲ.
ಮುಂಬೈನಲ್ಲಿ ನಿತ್ಯವೂ ಅರ್ಧ ಲಕ್ಷಕ್ಕಿಂತ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿದ್ದು, ಮುಂಬೈ ಈಗ ಕೊರೋನಾ ಕಪಿಮುಷ್ಠಿಗೆ ಒಳಗಾಗಿದೆ.
Deepika Padukone
ಕೊರೋನವೈರಸ್ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರವು ಈ ಕಠಿಣ ಕ್ರಮಗಳನ್ನು ಹೇರಿದ ನಂತರ, ಅನೇಕ ಚಲನಚಿತ್ರ ನಿರ್ಮಾಪಕರು ಸದ್ಯಕ್ಕೆ ರಾಜ್ಯದ ಹೊರಗೆ ಚಿತ್ರೀಕರಣ ಮಾಡಲು ನಿರ್ಧರಿಸಿದ್ದಾರೆ.
ಎಲ್ಲಾ ಅವ್ಯವಸ್ಥೆ ಮತ್ತು ಅನಿಶ್ಚಿತತೆಯ ಮಧ್ಯೆ, ದೀಪಿಕಾ ಪಡುಕೋಣೆ ಇತ್ತೀಚೆಗೆ ವ್ಯಾಯಾಮದ ನಂತರ ತನ್ನ ಫೋಟೋವನ್ನು ಹಂಚಿಕೊಂಡಿದ್ದು “ಉಸಿರಾಡು” ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

#Maharashtracurfew #DeepikaPadukone

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd