ಸೊಸೆಗೆ ಕೋಳಿಯ ರಕ್ತ ಕುಡಿಸಿ ವಿಕೃತಿ ಮೆರೆದ ಮಾವ , ಪತಿ
ಮಹಾರಾಷ್ಟ್ರದಲ್ಲಿ ಮಾವನೋರ್ವ ತನ್ನ ಸೊಸೆಗೆ ಕೋಳಿಯ ರಕ್ತ ಕುಡಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಡೋಂಗಿ ಸ್ವಾಮೀಜಿಯೊಬ್ಬನ ಮಾತು ಕೇಳಿ ಈ ರೀತಿ ನಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಮಾವನ ಈ ಕೃತ್ಯದಲ್ಲಿ ಮಹಿಳೆಯ ಪತಿಯೂ ಶಾಮೀಲಾಗಿರೋದಾಗಿ ತಿಳಿದುಬಂದಿದೆ. ಮಹಿಳೆಯ ಪತಿ ಹಾಗೂ ಮಾವನ ವಿರುದ್ಧ ಇದೀಗ ಲೈಂಗಿಕ ಕಿರುಕುಳ, ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆ ನೀಡಿರುವುದಾಗಿ ದೂರು ದಾಖಲಾಗಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಇನ್ನೂ ಸಂತ್ರಸ್ತ ಮಹಿಳೆಯು ತನ್ನ ಗಂಡ ನಪುಂಸಕನಾಗಿದ್ದು, ಮದುವೆ ವೇಳೆ ಈ ವಿಷಯ ಮುಚ್ಚಿಟ್ಟಿದ್ದರು. ಅಲ್ಲದೇ ಮಾವ ನನಗೆ ಮಕ್ಕಳಾಗುವುದಿಲ್ಲ ಎಂದು ಹೇಳಿಕೊಂಡು ನನಗೆ ಅವಮಾನ ಮಾಡುತ್ತಾ ಬಂದಿದ್ದರು. ಮಕ್ಕಳು ಆಗದೇ ಇರುವುದಕ್ಕೆ ಗಂಡನ ದೌರ್ಬಲ್ಯ ಕಾರಣ ಎಂದು ಸಂಬಂಧಿಕರಿಗೆ ನಾನು ಮನವರಿಕೆ ಮಾಡಿಕೊಟ್ಟಿದ್ದೆ. ಇದೇ ಕಾರಣಕ್ಕೆ ಮಾವ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.








