Mahesh Babu: ಲವ್ ಯು ಡ್ಯಾಡ್….ಭಾವನಾತ್ಮಕವಾಗಿ ಪತ್ರ ಬರೆದ ಮಹೇಶ್ ಬಾಬು..
ಸೂಪರ್ ಸ್ಟಾರ್ ಕೃಷ್ಣ ಹೃದಯಾಘಾತದಿಂದ ನಿಧನರಾದ ವಿಚಾರ ಗೊತ್ತೇ ಇದೆ. ಅವರ ಸಾವಿನ ನಂತರ ಟಾಲಿವುಡ್ ಇಂಡಸ್ಟ್ರಿ ಶೋಕದಲ್ಲಿದೆ. ಕೃಷ್ಣ ಅವರ ನಿಧನಕ್ಕೆ ಹಲವು ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ.
ನಟ ಕೃಷ್ಣ ಅವರ ನಿಧನದ ನಂತರ ಅವರ ಪುತ್ರ ಪ್ರಿನ್ಸ್ ಮಹೇಶ್ ಬಾಬು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರಹವನ್ನ ಹಂಚಿಕೊಂಡಿದ್ದಾರೆ.
“ನಿಮ್ಮ ಜೀವನ ಒಂದು ಉತ್ಸವದಂತೆ … ನಿಮ್ಮ ನಿರ್ಗಮನ ಅದಕ್ಕಿಂತ ದೊಡ್ಡ ಸಂಭ್ರಮ. ಅದು ನಿಮ್ಮ ಶ್ರೇಷ್ಠತೆ. ನೀವು ನಿರ್ಭಯವಾಗಿ, ಧೈರ್ಯದಿಂದ ಮತ್ತು ನಿಮ್ಮ ನೀತಿಯಂತೆ ಬದುಕಿದ್ದೀರಿ. ನೀವು ಹೊರಟು ಹೋದಂತೆ – ನನ್ನ ಸ್ಫೂರ್ತಿ… ನನ್ನ ಧೈರ್ಯ ಮತ್ತು ನಾನು ಅತ್ಯಂತ ಮುಖ್ಯವಾಗಿ ಹೊಂದಿದ್ದ ಉನ್ನತ ಮೌಲ್ಯಗಳು… ಎಲ್ಲವೂ ಕ್ಷಣಮಾತ್ರದಲ್ಲಿ ಮಾಯವಾಯಿತು.
ಆದರೆ.. ನಾನು ಹಿಂದೆಂದೂ ಹೊಂದಿರದ ಶಕ್ತಿಯನ್ನು ಈಗ ಅನುಭವಿಸುತ್ತೇನೆ. ನಾನೀಗ ನಿರ್ಭೀತನಾಗಿದ್ದೇನೆ…. ನಿಮ್ಮ ಜ್ಯೋತಿಯು ನನ್ನನ್ನು ಸದಾ ಬೆಳಗಿಸುತ್ತದೆ. ನಿಮ್ಮ ಪರಂಪರೆಯನ್ನು ಮುಂದೆ ಸಾಗಿಸುತ್ತೇನೆ. ನಾನು ನಿಮ್ಮನ್ನ ಹೆಚ್ಚು ಹೆಮ್ಮೆ ಪಡುವಂತೆ ಮಾಡುತ್ತೇನೆ. ಲವ್ ಯೂ ಡ್ಯಾಡ್, ನೀವು ನನ್ನ ಸೂಪರ್ ಸ್ಟಾರ್” ಎಂದು ಮಹೇಶ್ ಬಾಬು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Mahesh Babu: Love you dad….Mahesh Babu wrote an emotional letter..