Major | ಸಿನಿಮಾ ಟಿಕೆಟ್ ಗಾಗಿ ಕ್ಯೂನಲ್ಲಿ ನಿಂತ ಮಹೇಶ್ ಬಾಬು
1 min read
mahesh-babu-waits-major-tickets-queue saaksha tv
Major | ಸಿನಿಮಾ ಟಿಕೆಟ್ ಗಾಗಿ ಕ್ಯೂನಲ್ಲಿ ನಿಂತ ಮಹೇಶ್ ಬಾಬು
ಯಂಗ್ ಹೀರೋ ಅಡಿವಿ ಶೇಶ್ ನಟಿಸಿರುವ ಸೂಪರ್ ಸ್ಟಾರ್ ಮಹೇಶ್ ಬಾಬು ನಿರ್ಮಾಣದ ಸಿನಿಮಾ ಮೇಜರ್..!!
ಇದು ಆರ್ಮಿ ಆಫೀಸರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ ಕಥೆಯನ್ನು ಆಧರಿಸಿದ ಚಿತ್ರವಾಗಿದೆ.
ಶಶಿಕಿರಣ್ ಟಿಕ್ಕಾ ನಿರ್ದೇಶನದ ಈ ಪ್ಯಾನ್-ಇಂಡಿಯನ್ ಸಿನಿಮಾವು ಜೂನ್ 3 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಈ ಹಿನ್ನೆಲೆಯಲ್ಲಿ ಚಿತ್ರ ತಂಡ ವಿಭಿನ್ನವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.
ಪ್ರಚಾರದ ಭಾಗವಾಗಿ, ಸೂಪರ್ ಸ್ಟಾರ್ ಮಹೇಶ್ ಬಾಬು ಮೇಜರ್ ಸಿನಿಮಾದ ಟಿಕೆಟ್ ಗಳಿಗಾಗಿ ಸರತಿ ಸಾಲಿನಲ್ಲಿ ನಿಂತು ಎಲ್ಲರನ್ನೂ ಅಚ್ಚರಿಸಿಗೊಳಿಸಿದ್ದಾರೆ.

ಚಿತ್ರದ ನಿರ್ಮಾಪಕರಾದ ಮಹೇಶ್ ಬಾಬು ಅವರು ಜನಪ್ರಿಯ ಯೂಟ್ಯೂಬರ್ ನಿಹಾರಿಕಾ ಎನ್‌ಎಂ ಅವರೊಂದಿಗೆ ಸೇರಿ ವಿನೂತನ ವೀಡಿಯೊವನ್ನು ರಚಿಸಿದ್ದಾರೆ.
ಇದರಲ್ಲಿ ಅಡವಿ ಶೇಶ್ ಕೂಡ ಇದ್ದಾರೆ . ವೀಡಿಯೊದಲ್ಲಿ, ನಿಹಾರಿಕೆ ಟಿಕೆಟ್ ಕೌಂಟರ್‌ನಲ್ಲಿ ನಿಂತಿರುವ ವ್ಯಕ್ತಿಯನ್ನು ಇದು ಮೇಜರ್ ಸಿನಿಮಾ ಸಾಲನೇ ಅಂತಾ ಕೇಳುತ್ತಾರೆ.
ಹೀಗೆ ಕ್ಯೂನಲ್ಲಿ ನಿಂತಿರುವಾಗ ಹೀರೋ ಅಡವಿ ಶೇಶ್ ಕೂಡ ಕ್ಯೂಗೆ ಬರುತ್ತಾರೆ. ಆಗ ನಿಹಾರಿಕಾ ನಟನೊಂದಿಗೆ ಜಗಳವಾಡುತ್ತಾರೆ.
ಈ ಇಬ್ಬರ ಜಗಳ ನಡುವೆ ಮಹೇಶ್ ಬಾಬು ಕ್ಯೂನಲ್ಲಿ ಬಂದು ನಿಲ್ಲುತ್ತಾರೆ. ಹೀಗೆ ಸಾಗುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.