ಶ್ರೀಲಂಕಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಷ ಅವರ ಪಕ್ಷವಾದ ಪೀಫಲ್ಸ್ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿತ್ತು. ಈ ಮೂಲಕ ಶ್ರೀಲಂಕಾದ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ರಾಜಪಕ್ಷ ಅವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಪವಿತ್ರ ರಾಜಮಹ ವಿಹಾರಾಯದಲ್ಲಿ ನಡೆದ ಸಮಾರಂಭದಲ್ಲಿ 74 ವರ್ಷದ ರಾಜಪಕ್ಷ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಗೊಟಬಾಯ ಅವರು ರಾಜಪಕ್ಷ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಇನ್ನೂ ಈ ಸಮಾರಂಭಕ್ಕೆ ಪೀಪಲ್ ಪಾರ್ಟಿಯ ಮುಖಂಡರು ಹಾಗೂ ಇತರೇ ಗಣ್ಯರು ಸಾಕ್ಷಿಯಾದರು. 24ನೇ ವಯಸ್ಸಿನಲ್ಲೇ ಸಂಸತ್ತ್ ಸದಸ್ಯರಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದ ರಾಜಪಕ್ಷ ಅವರು ಈ ವರೆಗೂ ಎರಡು ಬಾರಿ ರಾಷ್ಟ್ರಪತಿ ಹಾಗೂ ಮೂರು ಬಾರಿ ಪ್ರಧಾನಿಯ ದಾಯತ್ವ ವಹಿಸಿದ್ದರು. ಇದೀಗ ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ರಾಜಪಕ್ಷ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.








