RCB ಸೋಲಿಗೆ ಪ್ರಮುಖ ಕಾರಣಗಳು..!!
ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆ ಈ ಬಾರಿಯೂ ಫಲಿಸಲಿಲ್ಲ. ಎಂದನಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರಾಸೆಯೊಂದಿಗೆ ಐಪಿಎಲ್ ಟೂರ್ನಿ ಮುಗಿಸಿದೆ. ಈ ಬಾರಿ ಆರ್ ಸಿಬಿ ಪಕ್ಕಾ ಕಪ್ ಗೆಲ್ಲುತ್ತೆ ಅನ್ನೋದು ಮತ್ತೆ ಸುಳ್ಳಾಗಿದೆ.
ಹೌದು…! ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ 2 ಮ್ಯಾಚ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಮೊದಲು ಟಾಸ್ ಸೋತು ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 157 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ 18ನೇ ಓವರ್ ನಲ್ಲಿ ಗುರಿ ಮುಟ್ಟಿತು.
ಅಲ್ಲಿಗೆ ಬೆಂಗಳೂರು ತಂಡ ನಿರಾಸೆಯೊಂದಿಗೆ ಟೂರ್ನಿಯ ಅಭಿಯಾನ ಮುಗಿಸಿದ್ರೆ, ರಾಜಸ್ಥಾನ್ ರಾಯಲ್ಸ್ ತಂಡ ಫೈನಲ್ ಪ್ರವೇಶಿಸಿದೆ.
ಹಾಗಾದ್ರೆ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಡವಿದ್ದು ಎಲ್ಲಿ..? ಬಲಿಷ್ಠ ಬೆಂಗಳೂರು ತಂಡ ಸೋಲಲು ಕಾರಣವೇನು..? ಅನ್ನೋದನ್ನ ನೋಡೋದಾದ್ರೆ..
ಮೊದಲಿಗೆ ಬರೋದು ಟಾಸ್ ಸೋಲು..!!
ನಿಜ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಿನ್ನಡೆಯಾಗಿದ್ದು, ಟಾಸ್ ನಲ್ಲಿ. ಯಾಕಂದರೇ ಅಹ್ಮದಾಬಾದ್ ಮೈದಾನ ಯಾವ ರೀತಿ ವರ್ತಿಸುತ್ತೆ ಅಂತಾ ಯಾರಿಗೂ ಗೊತ್ತಿರಲಿಲ್ಲ. ಹೀಗಾಗಿ ಯಾರೇ ಇಂತಹ ಪರಿಸ್ಥಿತಿಯಲ್ಲಿ ಚೇಸಿಂಗ್ ಮಾಡಲು ನಿರ್ಧರಿಸುತ್ತಾರೆ. ಆದ್ರೆ ಆರ್ ಸಿಬಿಗೆ ಟಾಸ್ ಕೈ ಕೊಡ್ತು. ಅಲ್ಲಿಗೆ ಬೆಂಗಳೂರು ತಂಡ ಪಂದ್ಯದಲ್ಲಿ ಅರ್ಧ ಸೋತಂತೆ ಆಗಿತ್ತು.

ಎರಡನೇಯ ಕಾರಣ ಕೆಜಿಎಫ್ ವಿಫಲ..!!
ಟಾಸ್ ಏನೇ ಇದ್ದರೂ ಅದು ಆಟಗಾರರ ಕೈಯಲ್ಲಿ ಇರೋದಿಲ್ಲ. ಆದ್ರೆ ಬೆಂಗಳೂರು ತಂಡಕ್ಕೆ ಮಾರಕವಾಗಿದ್ದು, ಕೆಜಿಎಫ್ ವಿಫಲ. ಕ್ವಾಲಿಫೈಯರ್ ನಂತಹ ಬಿಗ್ ಮ್ಯಾಚ್ ಗಳಲ್ಲಿ ಸ್ಟಾರ್ ಆಟಗಾರರು ಮುಂದೆ ನಿಂತು ತಂಡವನ್ನು ಮುನ್ನಡೆಸಬೇಕು. ಆದ್ರೆ ಅದು ಆಗಲೇ ಇಲ್ಲ. ವಿರಾಟ್ ಕೊಹ್ಲಿ ಪವರ್ ಪ್ಲೇ ನಲ್ಲಿ ಔಟ್ ಆದ್ರೆ, ಫಾಫ್ ಡುಪ್ಲಸಿಸ್ 24 ಕ್ಕೆ ಆಟ ಮುಗಿಸಿದ್ರು. ಗ್ಲೆನ್ ಮಿಂಚಿ ಮರೆಯಾದ್ರು. ಇದು ತಂಡದ ಸೋಲಿಗೆ ಪ್ರಮುಖ ಕಾರಣ.
ಬ್ಯಾಟ್ ಝಳಪಿಸದ ದಿನೇಶ್ ಕಾರ್ತಿಕ್
ಪಂದ್ಯದಲ್ಲಿ ಆರ್ ಸಿಬಿ ಬ್ಯಾಟ್ ಟು ಬ್ಯಾಟ್ ವಿಕೆಟ್ ಗಳನ್ನು ಕಳೆದುಕೊಂಡರೂ, 15 ನೇ ಓವರ್ ವರೆಗೂ ರಜತ್ ಕೃಪೆಯಿಂದ ಉತ್ತಮ ಸ್ಥಿತಿಯಲ್ಲಿತ್ತು. ಇಲ್ಲಿಂದ ಟಾರ್ಗೆಟ್ ಸೆಟ್ ಮಾಡಬೇಕಿದ್ದದ್ದು, ಫಿನಿಷರ್ ಗಳು. ಆದ್ರೆ ಮಹಿಪಾಲ್ ಮಿಂಚಲಿಲ್ಲ. ಭಾರಿ ನಿರೀಕ್ಷೆ ಮೂಡಿಸಿದ್ದ ದಿನೇಶ್ ಕಾರ್ತಿಕ್ 18 ಓವರ್ ನಲ್ಲಿ ಔಟ್ ಆದರು. ಇಲ್ಲಿಗೆ ಆರ್ ಸಿಬಿ ರನ್ ವೇಗಕ್ಕೆ ಕಡಿವಾಣ ಬಿತ್ತು.
ಬೌಲಿಂಗ್ ವೈಫಲ್ಯ
157 ರನ್ ಗಳ ಗುರಿಯನ್ನ ಡಿಫೆಂಡ್ ಮಾಡುವಾಗ ಮೊದಲ ಪವರ್ ಪ್ಲೇ ನಿರ್ಣಾಯಕವಾಗಿರುತ್ತದೆ. ಆದ್ರೆ ಆರ್ ಸಿ ಬಿ ಬೌಲರ್ ಗಳು ಅದನ್ನ ಮರೆತಂತೆ ಕಾಣುತ್ತಿತ್ತು. ವಿಕೆಟ್ ಪಡೆದು ಎದುರಾಳಿ ಮೇಲೆ ಒತ್ತಡ ಹೇರುವುದನ್ನ ಬಿಟ್ಟು, ರನ್ ಗಳನ್ನ ಬಿಟ್ಟುಕೊಟ್ಟರು. ಪವರ್ ಪ್ಲೇ ನಲ್ಲಿ ಆರ್ ಸಿಬಿ ಬೌಲರ್ ಗಳು ಪವರ್ ತೋರಿಸದೇ ಇದ್ದದ್ದು, ಬೆಂಗಳೂರು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.








