ಅಭಿವೃದ್ಧಿಗೆ ಶ್ರಮಿಸಿ ಬಸರಾಳು ಗ್ರಾಮವನ್ನು ಆದರ್ಶಗ್ರಾಮವನ್ನಾಗಿಸಿ : ಸುಮಲತಾ Sumalatha saaksha tv
ಮಂಡ್ಯ : ಅಭಿವೃದ್ಧಿಗೆ ಶ್ರಮಿಸಿ ಬಸರಾಳು ಗ್ರಾಮವನ್ನು ಆದರ್ಶಗ್ರಾಮವನ್ನಾಗಿಸಿ ಎಂದು ಸಂಸದೆ ಸುಮಲತಾ ಅಂಬರೀಷ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದ ಕಾಲಭೈರವೇಶ್ವರ ಸಮುದಾಯ ಭವನದಲ್ಲಿ ನಡೆದ 2021-22 ನೇ ಸಾಲಿನ ಸಂಸದರ ಆದರ್ಶ ಗ್ರಾಮವಾದ ಬಸರಾಳು ಗ್ರಾಮದ ಅಭಿವೃದ್ಧಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಮಲತಾ, ಸಂಸದರ ನಿಧಿಯ ಮೂಲಕ ಗ್ರಾಮದ ಅಭಿವೃದ್ಧಿಗಾಗಿ 20 ಲಕ್ಷ ರೂ ಗಳನ್ನು ಘೋಷಣೆ ಮಾಡಿದರು. ಅಲ್ಲದೇ ಅಭಿವೃದ್ಧಿಗೆ ಶ್ರಮಿಸಿ ಬಸರಾಳು ಗ್ರಾಮವನ್ನು ಆದರ್ಶಗ್ರಾಮವನ್ನಾಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಸೌಲಭ್ಯ, ಸರ್ಕಾರಿ ಯೋಜನೆಗಳನ್ನು ಬಸರಾಳು ಗ್ರಾಮಕ್ಕೆ ಸಮರ್ಪಕವಾಗಿ ಒದಗಿಸಿ. ಕಳೆದ ವರ್ಷ ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಬೆಸಗರಹಳ್ಳಿ ಗ್ರಾಮವನ್ನು ಅಭಿವೃದ್ಧಿಪಡಿಸಿದ್ದೇವೆ..
ಈ ವರ್ಷ ಬಸರಾಳು ಗ್ರಾಮದ ಅಭಿವೃದ್ಧಿಕ್ಕೆ ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು. ಬಸರಾಳು ಗ್ರಾಮಕ್ಕೆ ಶಾಲೆ, ಶಾಲೆಗಳಿಗೆ ಸಮರ್ಪಕ ಸೌಲಭ್ಯಗಳ ವ್ಯವಸ್ಥೆ ಮಾಡಿ, ಆಸ್ಪತ್ರೆ, ಕುಡಿಯುವ ನೀರಿನ ಘಟಕ ಅಭಿವೃದ್ಧಿ, ವೈದ್ಯಕೀಯ ಸೌಲಭ್ಯಗಳ ಒದಗಿಸುವಿಕೆ.
ಕೆರೆಗಳ ಅಭಿವೃದ್ಧಿ, ಸಮಗ್ರ ಕೃಷಿ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡಿ. ಬಸರಾಳು ಗ್ರಾಮವನ್ನು ರಾಜ್ಯಕ್ಕೆ ಮಾದರಿವನ್ನಾಗಿ ಎಂದು ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.
ಇನ್ನು ಈ ಸಭೆಯಲ್ಲಿ ಜಿ.ಪಂ ಸಿಇಒ ದಿವ್ಯಪ್ರಭು, ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ, ಎಸಿ ಐಶ್ವರ್ಯ,ಗ್ರಾ.ಪಂ ಅಧ್ಯಕ್ಷೆ ಪವಿತ್ರ, ಇತರರು ಭಾಗಿಯಾಗಿದ್ದರು.