Hombale Films: ಆರ್ ಸಿ ಬಿ ಮತ್ತು ಹೊಂಬಾಳೆ ಫಿಲ್ಮ್ಸ್ ಸಹಭಾಗಿತ್ವ

1 min read
Hombale Films Saaksha Tv

ಆರ್ ಸಿ ಬಿ ಮತ್ತು ಹೊಂಬಾಳೆ ಫಿಲ್ಮ್ಸ್ ಸಹಭಾಗಿತ್ವ

ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡುತ್ತ ದೇಶಾದ್ಯಂತ ಹವಾ ಎಬ್ಬಿಸಿರುವ ಹೊಂಬಾಳೆ ಫಿಲ್ಮ್ಸ್ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಹೌದು ಹೊಂಬಾಳೆ ಫಿಲ್ಮಸ್ ಹೇಳಿಕೊಂಡಿರುವ ಹಾಗೇ ಆರ್‌ಸಿಬಿ ಜೊತೆಗೆ ಹೊಂಬಾಳೆ ಫಿಲ್ಮ್ಸ್ ಕೈಜೋಡಿಸಿದ್ದು, ಇನ್ಮುಂದೆ ಬೇರೆಯದೇ ರೀತಿಯ ಎಂಟರ್‌ಟೇನ್ಮೆಂಟ್ ಸಿಗಲಿದೆ ಎಂಬ ಭರವಸೆಯನ್ನು ನೀಡಿದೆ.

ಹೊಂಬಾಳೆ ಫಿಲ್ಮ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್ ಸಿ ಬಿ ವಿಶೇಷ ಸಹಭಾಗಿತ್ವದಲ್ಲಿ ಕ್ರೀಡೆ ಮತ್ತು ಚಲನಚಿತ್ರ ಮನರಂಜನೆಯ ಪರಿಪೂರ್ಣ ಸಮ್ಮಿಲನಕ್ಕೆ ಸಹಿ ಮಾಡಿವೆ. ಈ ಸಹಯೋಗವು ಭರಪೂರ ಮನೋರಂಜನೆ, ಗ್ಲಾಮರ್, ಸಿನಿಮಾ, ಕ್ರೀಡೆಗಳ ಅದ್ಭುತ ಸಂಗಮವನ್ನು ಉಂಟುಮಾಡಲಿದೆ. ಅಭಿಮಾನಿಗಳಿಗೆ ಹೈ ವೋಲ್ಟೇಜ್ ಥ್ರಿಲ್ ನೀಡುವ ಗುರಿಯನ್ನು ಹೊಂದಿವೆ.

ಆರ್‌ಸಿಬಿ ಜೊತೆಗಿನ ಈ ಸಹಭಾಗಿತ್ವದ ಕುರಿತು ಮಾತನಾಡಿದ ಹೊಂಬಾಳೆ ಫಿಲ್ಮ್ಸ್ ಸಂಸ್ಥಾಪಕರಾದ ವಿಜಯ್ ಕಿರಂಗಂದೂರು, ‘ಸಿನಿಮಾ ಮಾಡುವುದು ನನ್ನ ಪ್ಯಾಷನ್. ಕ್ರಿಕೆಟ್ ಪ್ರೇಮಿಯಾಗಿ ಮತ್ತು ಕನ್ನಡಿಗನಾಗಿ ಕ್ರಿಕೆಟ್ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿದೆ. ಹೊಂಬಾಳೆ ಫಿಲ್ಮ್ಸ್ ಮತ್ತು ಆರ್‌ಸಿಬಿ ಎರಡಕ್ಕೂ ನಮ್ಮ ಬೆಂಗಳೂರೇ ತವರಾಗಿರುವುದರಿಂದ ಈ ಪಾಲುದಾರಿಕೆ ಸಹಜವಾಗಿದೆ. ಸ್ವಲ್ಪ ಸಮಯದಿಂದ ಈ ಸಹಯೋಗದ ಬಗ್ಗೆ ಕೆಲಸ ಮಾಡುತ್ತಿರುವ ನಾವು ಈ ಬಗ್ಗೆ ತುಂಬಾ ಉತ್ಸುಕರಾಗಿದ್ದೇವೆ.

2022 ನಮ್ಮೆಲ್ಲರಿಗೂ ರಾಯಲ್‌ ಆಗಿರಲಿದೆ. ಕ್ರೀಡೆ ಮತ್ತು ಮನರಂಜನೆ ವಿಚಾರದಲ್ಲಿ ಕ್ಷಣಮಾತ್ರದಲ್ಲಿ ಬದಲಾಗುವ ಅಭಿಮಾನಿಗಳ ನಡವಳಿಕೆ ಮತ್ತು ಆದ್ಯತೆಗಳನ್ನು ಅರಿತು ಮನರಂಜನೆ ನೀಡಲಿದ್ದೇವೆ. ಹೊಸ ಮನರಂಜನಾ ಮಾರ್ಗಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಪ್ರಸರಣ ಉದ್ಯಮಕ್ಕೆ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ. ಕ್ರೀಡೆ ಮತ್ತು ಸಿನಿಮಾ ಮನರಂಜನಾ ವಲಯದಲ್ಲಿ ನಮ್ಮ ಅಭಿಮಾನಿಗಳಿಗೆ ಮ್ಯಾಜಿಕ್ ಮೂಮೆಂಟ್‌ಗಳನ್ನು ಸೃಷ್ಟಿಸಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ’ ಎಂದಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd