ಬಾಗಲಕೋಟೆ : ಬಾಗಲಕೋಟೆಯಲ್ಲಿ ಮಹಾಮಳೆಗೆ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ನದಿ ಪಾತ್ರದ ಜನರಲ್ಲಿ ಇದೀಗ ಪ್ರವಾಹದ ಭೀತಿ ಎದುರಾಗಿದೆ. ನದಿತಟದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಡಂಗೂರ ಸಾರಿಸುವ ಚೊಳಚಗುಡ್ಡ ಗ್ರಾಮಸ್ಥರಲ್ಲಿ ಈ ಕುರಿತಾಗಿ ಜಾಗೃತಿ ಮೂಡಿಸಲಾಗಿದೆ. ಇನ್ನೂ ಮಲಪ್ರಭಾ ನದಿ ತಟದಲ್ಲಿರುವ ಚೊಳಚಗುಡ್ಡ ಗ್ರಾಮ ಕಳೆದ ವರ್ಷ ಸಂಭವಿಸಿದ್ದ ಪ್ರವಾಹದಲ್ಲೂ ತತ್ತರಿಸಿಹೋಗಿತ್ತು. ಕಳೆದ ವರ್ಷದ ಪ್ರವಾಹಕ್ಕೆ ತುತ್ತಾಗಿ ಅನೇಕ ಅನಾಹುತಗಳಿಗೆ ಸಾಕ್ಷಿಯಾಗಿತ್ತು. ಇದೀಗ ಮತ್ತೆ ಗ್ರಾಮದ ಜನರಲ್ಲು ಪ್ರವಾಹದ ಆತಂಕ ಮನೆಮಾಡಿದೆ.
ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ರಾಜೀನಾಮೆ ಮತ್ತು ಸ್ಟಿಂಗ್ ಆಪರೇಷನ್ ಗಳ ಮಹಾ ಸಮರ ಶುರುವಾಗಿದೆ. ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮೂಲಕ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ...








