ಮಲಯಾಳಂ ಚಿತ್ರರಂಗದಲ್ಲಿ ಈಗ ಹೇಮಾ ಸಮಿತಿ ವರದಿ ಸದ್ದಾಗುತ್ತಿದೆ. ಈ ಮಧ್ಯೆ ಚಿತ್ರರಂಗದ ಖ್ಯಾತ ನಟ ನಿವಿನ್ ಪೌಲಿ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ.
ನಟಿಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದಾರೆ. ಮಾಲಿವುಡ್ನಲ್ಲಿ ಅನೇಕ ನಟರ ವಿರುದ್ಧ ಈ ರೀತಿಯ ಗಂಭೀರ ಆರೋಪಗಳು ಈಗ ಸದ್ದು ಮಾಡುತ್ತಿದೆ. ಹೇಮಾ ಸಮಿತಿ ವರದಿಯಲ್ಲಿ ಮಲಯಾಳಂ ಚಿತ್ರರಂಗ ಕರಾಳ ಮುಖ ಬಯಲಾಗಿತ್ತು. ಇದರ ಬೆನ್ನಲ್ಲಿಯೇ ನಟಿಯೊಬ್ಬರು ‘ಪ್ರೇಮಂ’ ಸಿನಿಮಾದ ನಾಯಕ ನಟ ನಿವಿನ್ ಪೌಲಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಿನಿಮಾದ ಮಾತುಕಥೆ ಸಲುವಾಗಿ ದುಬೈಗೆ ತೆರಳಿದ್ದಾಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ನಟ ನಿವಿನ್ ಪೌಲಿ 6ನೇ ಆರೋಪಿ ಆಗಿದ್ದಾರೆ. ಶ್ರೇಯಾ ಎಂಬ ಮಹಿಳೆ ಎ1 ಆಗಿದ್ದಾರೆ. ನಿರ್ಮಾಪಕ ಎ.ಕೆ. ಸುನಿಲ್ ಎ2 ಆಗಿದ್ದಾರೆ. ಸಿನಿಮಾದ ಮಾತುಕಥೆಗಾಗಿ ಶ್ರೇಯಾ ಎಂಬಾಕೆಯು ನಟಿಯನ್ನು ದುಬೈಗೆ ಕರೆಸಿಕೊಂಡಿದ್ದರು. ಅಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ವಿಷಯವಾಗಿ ಮಾತನಾಡಿರುವ ನಟ ನಿವಿನ್ ಪೌಲಿ, ಯುವತಿಯೊಬ್ಬಳ ಮೇಲೆ ನಾನು ಲೈಂಗಿಕ ದೌರ್ಜನ್ಯ ಎಸಗಿದ್ದೇನೆ ಎಂದು ಆರೋಪಿಸಿರುವ ಸುಳ್ಳು ಸುದ್ದಿ ನನ್ನ ಗಮನಕ್ಕೆ ಬಂದಿದೆ. ಇದು ಸಂಪೂರ್ಣ ಸುಳ್ಳು ಎಂದಿದ್ದಾರೆ.