Sreejith Ravi ; ಬಾಲಕಿಯರ ಮುಂದೆ ಅಶ್ಲೀಲ ವರ್ತನೆ – ಮಲಯಾಳಂ ಶ್ರೀಜಿತ್ ರವಿ ಬಂಧನ….
ಇಬ್ಬರು ಅಪ್ರಾಪ್ತ ಬಾಲಕೀಯರ ಮುಂದೆ ಅಶ್ಲೀಲ ವರ್ತನೆ ತೋರಿಸಿದ ಆರೋಪದಡಿ ಮಲಯಾಳಂನ ಜನಪ್ರಿಯ ನಟ ಶ್ರೀಜಿತ್ ರವಿಯನ್ನು ಪೋಕ್ಸೊ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 4 ರಂದು ಸಮೀಪದ ಪಾರ್ಕ್ ಒಂದರಲ್ಲಿ ಕಪ್ಪು ಬಣ್ಣದ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬರು ತಮ್ಮ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪೋಷಕರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ತನಿಖೆಯ ಸಮಯದಲ್ಲಿ, ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಕಾರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಿಮವಾಗಿ ಅದು ಮಲಯಾಳಂನ ಜನಪ್ರಿಯ ನಟ ರವಿ ಅವರ ಮಾಲೀಕತ್ವಕ್ಕೆ ಸೇರಿದ ಕಾರು ಎಂದು ತಿಳಿದುಬಂದಿದೆ. Malayalam actor Sreejith Ravi arrested for allegedly flashing to minor girls in public
”ದೂರು ನೀಡಿದ ಮಕ್ಕಳು ಆರೋಪಿಯನ್ನು ಗುರುತಿಸಿದ್ದಾರೆ. ಎಫ್ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 46 ವರ್ಷದ ನಟ ಶ್ರೀಜಿತ್ ರವಿ ವಿರುದ್ಧ ಸೆಕ್ಷನ್ 11 (1) ಮತ್ತು 12 ಸೇರಿದಂತೆ ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಶ್ರೀಜಿತ್ ರವಿ ವಿರುದ್ಧ ಅಶ್ಲೀಲ ಪ್ರಕರಣ ದಾಖಲಾಗಿರುವುದು ಇದೇ ಮೊದಲಲ್ಲ. ವರದಿಗಳ ಪ್ರಕಾರ, ಇದೇ ಕೃತ್ಯಕ್ಕಾಗಿ ನಟನನ್ನ 2016 ರಲ್ಲಿ ಬಂಧಿಸಲಾಯಿತು. ಸುಮಾರು 16 ಹುಡುಗಿರಿಂದ ಗುಂಪಿನ ನಡುವೆ ಅಶ್ಲೀಲ ವರ್ತನೆ ತೋರಿದ್ದಾರೆ ಎಂದು ಆರೋಪಕ್ಕೆ ಬಂಧಿಸಲಾಗಿತ್ತು. ಅಂದು ಶ್ರೀಜಿತ್ಗೆ ಜಾಮೀನು ಸಿಕ್ಕಿತ್ತು. ನಂತರ ಪೊಲೀಸರು ಅಗತ್ಯ ಸಾಕ್ಷ್ಯ ಸಂಗ್ರಹಿಸದೆ ಪ್ರಕರಣವನ್ನು ಹಾಳು ಮಾಡಿದ್ದಾರೆ ಎಂದು ಅಪ್ರಾಪ್ತ ಬಾಲಕಿಯರ ಪೋಷಕರು ಆರೋಪಿಸಿದ್ದಾರೆ.