Malaysia Open : ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟ ಪ್ರಣಯ್..!!
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಎಚ್ ಎಸ್ ಪ್ರಣಯ್ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪ್ರಣಯ್ 21-9, 15-21, 21-16 ನೇರ ಗೇಮ್ಗಳಿಂದ ಇಂಡೊನೇಷ್ಯಾ ಡ್ವಿ ವಾರ್ಡೊಯೊ ಅವರನ್ನು ಸೋಲಿಸಿದರು. ಒಂದು ಗಂಟೆ ನಾಲ್ಕು ನಿಮಿಷ ನಡೆದ ಕಾದಾಟದಲ್ಲಿ ಪ್ರಣಯ್ ಜಯ ಸಾಧಿಸಿದರು.
ಮೊದಲ ಗೇಮ್ ನಲ್ಲಿ 6-5 ರಲ್ಲಿ ಸಾಗುತ್ತಿದ್ದ ಪಂದ್ಯದಲ್ಲಿ ಪ್ರಣಯ್ ಸ್ಥಿರ ಆಟದ ಪ್ರದರ್ಶನ ನೀಡಿ ಗಮನ ಸೆಳೆದ್ರು. ಇವರು ಬಳಿಕ ಸತತ 10 ಅಂಕಗಳನ್ನು ಕಲೆ ಹಾಕಿ ಅಂತರವನ್ನು ಹಿಗ್ಗಿಸಿಕೊಂಡರು. ಅಲ್ಲದೆ ಸುಲಭವಾಗಿ ಗೇಮ್ ಗೆದ್ದರು.
ಎರಡನೇ ಗೇಮ್ ನ ಆರಂಭದಿಂದಲೂ ಇಂಡೊನೇಷ್ಯಾ ಆಟಗಾರ ಸ್ಥಿರ ಪ್ರದರ್ಶನ ನೀಡಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದರು. ಅಲ್ಲದೆ ಗೇಮ್ ಗೆದ್ದು ಪಂದ್ಯವನ್ನು ಜೀವಂತವಾಗಿರಿಸಿಕೊಂಡರು.
ಮೂರನೇ ಹಾಗೂ ಕೊನೆಯ ಗೇಮ್ನಲ್ಲಿ ಪ್ರಣಯ್ ಸ್ಥಿರ ಪ್ರದರ್ಶನ ನೀಡಿದರು. ಅಲ್ಲದೆ ಅಂಕಗಳನ್ನು ಕಲೆ ಹಾಕಿತ್ತು ಸಾಗಿದರು. ಈ ಗೇಮ್ನ ಯಾವುದೇ ಹಂತದಲ್ಲಿ ಎದುರಾಳಿ ಆಟಗಾರ ಪ್ರಣಯ್ ಗೆ ಸವಾಲು ಎಸೆಯಲಿಲ್ಲ. ಪರಿಣಾಮ ಪ್ರಣಯ್ ಜಯ ಸಾಧಿಸಿದರು.
Malaysia Open : Pranay to the quarter finals
Malaysia Open, HS Prannoy, Badminton