Malaysia Open : ಮೊದಲ ಸುತ್ತಿನಲ್ಲೇ ಆಘಾತ ಎದುರಿಸಿದ ಸಿಂಧು..!!
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (P.V.Sindhu) ಅವರು ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನ
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದ ಮೇಲೆ ವಿಶ್ವದ ಚಿತ್ತ ನೆಟ್ಟಿತ್ತು. ಮೊದಲ ಸುತ್ತಿನಲ್ಲೇ ವಿಶ್ವದ ಸ್ಟಾರ್ ಆಟಗಾರ್ತಿಯರು ಅಖಾಡಕ್ಕೆ ಇಳಿದಿದ್ದು, ಕ್ರೀಡಾ ಪ್ರೇಮಿಗಳನ್ನು ತನ್ನತ್ತ ಸೆಳೆದಿತ್ತು. ಈ ಇಬ್ಬರೂ ಆಟಗಾರ್ತಿಯ ಆಟವನ್ನು ಕಣ್ಣು ತುಂಬಿ ಕೊಳ್ಳಲು ವಿಶ್ವವೇ ಕಾದು ಕುಳಿತಿತ್ತು. ಮಹತ್ವದ ಪಂದ್ಯದಲ್ಲಿ ಭಾರತದ ಪಿ.ವಿ ಸಿಂಧು 12-21, 21-18, 15-21 ರಿಂದ ಸ್ಪೇನ್‌ನ ಕರೋಲಿನಾ ಮರಿನ್ ಅವರ ವಿರುದ್ಧ
ಮೊದಲ ಗೇಮ್ ನಲ್ಲಿ ಅಂಕಗಳನ್ನು ಕಲೆ ಹಾಕುವಲ್ಲಿ ಹಿಂದೆ ಬಿದ್ದ ಸಿಂಧು ಅಂಕಗಳನ್ನು ನೀಡಿ ಕೈ ಸುಟ್ಟುಕೊಂಡರು. ಆದರೆ ಎರಡನೇ ಗೇಮ್‌ನಲ್ಲಿ ಸ್ಥಿರ ಆಟದ ಪ್ರದರ್ಶನವನ್ನು ನೀಡಿದ ಸಿಂಧು ಮನಮೋಹಕ ಗ್ಯಾಪ್ ಶಾಟ್‌ಗಳನ್ನು ಪ್ರಯೋಗಿಸಿ ಗಮನ ಸೆಳೆದರು. ಅಲ್ಲದೆ ಎರಡನೇ ಗೇಮ್ ಗೆದ್ದು ಬೀಗಿದರು. ಪರಿಣಾಮ ಮೂರನೇ ಹಾಗೂ ಕೊನೆಯ ಗೇಮ್ ನತ್ತ ಎಲ್ಲರ ಚಿತ್ತ ನೆಟ್ಟಿತ್ತು.
ಮೂರನೇ ಗೇಮ್‌ನಲ್ಲೂ ಸ್ಪೇನ್‌ನ ಕರೋಲಿನಾ ಸ್ಥಿರ ಆಟದ ಪ್ರದರ್ಶನ ನೀಡಿ ಸತತ ಅಂಕಗಳನ್ನು ಬಾಚಿಕೊಂಡರು. ಅಲ್ಲದೆ ಕೊನೆಯ ಹಂತದಲ್ಲಿ ಆಟದಲ್ಲಿ ಚುರುಕು ಕಂಡ ಸಿಂಧು, ನಿರಾಸೆ ಅನುಭವಿಸಬೇಕಾಯಿತು.