ಚಾಮರಾಜನಗರ: ಮತ್ತೊಮ್ಮೆ ಮಲೆ ಮಹದೇಶ್ವರ (Male Mahadeshwara Hill) ಕೋಟ್ಯಾಧೀಶನಾಗಿದ್ದಾನೆ. ಬೆಟ್ಟದಲ್ಲಿ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು, ಒಂದು ತಿಂಗಳಲ್ಲಿ 2.90 ಕೋಟಿ ರೂ. ಸಂಗ್ರಹವಾಗಿದೆ.
ಮಹದೇಶ್ವರ ಬೆಟ್ಟಕ್ಕೆ ಇತ್ತೀಚೆಗೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲಿಯೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವರ ದರ್ಶನ ಮಾಡಿದ್ದಾರೆ.
ಈ ಬಾರಿಯೂ ಹುಂಡಿಯಲ್ಲಿ 2.90 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಒಂದು ತಿಂಗಳ ಅವಧಿಯಲ್ಲಿ ಭಕ್ತರು ಮಹದೇಶ್ವರನಿಗೆ ನಗದು ರೂಪದಲ್ಲಿ ಒಟ್ಟು 2,90,00,732 ರೂ. ಕಾಣಿಕೆ ಬಂದಿದೆ. ಇದರಲ್ಲಿ 13 ಲಕ್ಷ ರೂ.ಗೂ ಅಧಿಕ ಹಣ ನಾಣ್ಯಗಳ ರೂಪದಲ್ಲಿಯೇ ಸಂಗ್ರಹವಾಗಿವೆ. 102 ಗ್ರಾಂ ಚಿನ್ನ, 3 ಕೆಜಿ 155 ಗ್ರಾಂ ಬೆಳ್ಳಿ ಕಾಣೆಕೆ ರೂಪದಲ್ಲಿ ಬಂದಿವೆ. 2 ಸಾವಿರ ಮುಖಬೆಲೆಯ 12 ನೋಟುಗಳು ಕೂಡ ಬಂದಿವೆ.








