ಸೋಮವಾರದಿಂದ ಮಾಲ್, ಹೋಟೆಲ್ ಓಪನ್..?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, ರಾಜ್ಯ ಸರ್ಕಾರ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡುತ್ತಿದೆ. ಈ ಹಿಂದೆ ಕೆಲ ಜಿಲ್ಲೆಗಳಲ್ಲಿ ಹೊರತು ಪಡಿಸಿ ಇನ್ನುಳಿದ ಜಿಲ್ಲೆಗಳಲ್ಲಿ ಸೆಮಿ ಲಾಕ್ ಡೌನ್ ಘೋಷಣೆ ಮಾಡಿತ್ತು. ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಿತ್ತು. ಇದು ಜೂನ್ 21ಕ್ಕೆ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಾವ ರೀತಿ ಲಾಕ್ ಡೌನ್ ಸಡಲಿಕೆ ಮಾಡುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.
ಇತ್ತ ಕೊರೊನಾ ತಾಂತ್ರಿಕ ತಜ್ಞರ ಸಮಿತಿ ಸೋಂಕು ಇಳಿಕೆ ಹಿನ್ನೆಲೆಯಲ್ಲಿ ಜನರು ಗುಂಪು ಸೇರದಂತೆ ನೀಡಿಕೊಳ್ಳುವ ಮೂಲಕ ಕೆಲವು ಆರ್ಥಿಕ ಚಟುವಟಿಕೆ ಆರಂಭಿಸುಬಹುದು ಎಂದು ಹೇಳಿದೆ. ಮಾಲ್, ರೆಸ್ಟೋರೆಂಟ್, ಮದುವೆ ಮಂಟಪಗಳು, ಶಾಪಿಂಗ್ ಕಾಂಪ್ಲೇಕ್ಸ್ ಗಳನ್ನು ಜೂನ್ 21 ರಿಂದ ಮತ್ತೆ ತೆರೆಯಬಹುದು ಎಂದು ಸಮಿತಿ ತಿಳಿಸಿದೆ.
ಶೇಕಡಾ 50 ರಷ್ಟು ಜನರೊಂದಿಗೆ ರೆಸ್ಟೋರೆಂಟ್, ಮಾಲ್, ಸಲೂನ್, ಸ್ಪಾ ತೆರೆಯಬಹುದು ಎಂದು ಸೂಚಿಸಿದೆ.
ಅಲ್ಲದೆ ಜೂನ್ ಅಂತ್ಯದವರೆಗೂ ರಾತ್ರಿ ಕಫ್ರ್ಯೂ ಮುಂದುವರೆಸುವಂತೆ ತಿಳಿಸಿದೆ. ಅಲ್ಲದೆ ಸಾರ್ವಜನಿಕ ರ್ಯಾಲಿ, ಧರಣಿ, ಜಾತ್ರೆ ಹಬ್ಬಗಳ ನಿರ್ಭಂಧ ಹೇರಿ ಎಂದು ಸರ್ಕಾರಕ್ಕೆ ತಿಳಿಸಿದೆ. ಜೊತೆಗೆ ಜುಲೈ 05ರಿಂದ ಮೂರನೇ ಹಂತದ ಲಾಕ್ ಡೌನ್ ತೆರವು ಆರಂಭವಾಗಲಿ ಎಂದಿದೆ.









