ಮಾಲ್ ಗಳಿಗೆ ಪಾರ್ಕಿಂಗ್ ಶುಲ್ಕ ತೆಗೆದುಕೊಳ್ಳುವ ಹಕ್ಕಿಲ್ಲ
ಕೊಚ್ಚಿ : ಮಾಲ್ ಗಳು ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುವ ಹಕ್ಕನ್ನ ಹೊಂದಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಕೇರಳ ಹೈಕೋರ್ಟ್ ತಿಳಿಸಿದೆ.
ಡಿಸೆಂಬರ್ 2 ರಂದು ನಟ ಪೌಲಿ ವಡಕ್ಷಣ್ ಅವರಯ ಎರ್ನಾಕುಲಂನಲ್ಲಿರುವ ಲಾಲು ಮಾಲ್ ಗೆ ಭೇಟಿ ನೀಡಿದ್ದರು.
ಆಗ ಎಂದಿನಂತೆ ಮಾಲ್ ಸಿಬ್ಬಂದಿ, ಪೌಲಿ ಅವರಿಗೆ ಪಾರ್ಕಿಂಗ್ ಶುಲ್ಕವನ್ನು ವಿಧಿಸಿದ್ದರು.
ಅಲ್ಲದೇ ಹಣ ಪಾವತಿಸದೇ ಇದ್ದರೇ ಮಾಲ್ ನಿಂದ ಹೊರಹೋಗಲು ಬಿಡುವುದಿಲ್ಲ ಎಂದು ಮಾಲ್ ಸಿಬ್ಬಂದಿ ತಾಕೀತು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಪೌಲಿ ವಡಕ್ಷಣ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ನಿಯಮಗಳಂತೆ ಕಟ್ಟಡ ಕಟ್ಟುವಾಗ ಪಾರ್ಕಿಂಗ್ ಜಾಗವನ್ನು ಗೊತ್ತುಪಡಿಸಬೇಕು.
ಪಾರ್ಕಿಂಗ್ ಸ್ಥಳ ಗೊತ್ತುಪಡಿಸದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದಿಲ್ಲ.
ಆದರೆ ಕಟ್ಟಡ ನಿರ್ಮಾಣ ಮಾಡಿದ ನಂತರ ಪಾರ್ಕಿಂಗ್ಗೆ ಮಾಲೀಕರು ಶುಲ್ಕ ವಿಧಿಸಬಹುದೇ ಎಂಬುದು ಈಗಿರುವ ಪ್ರಶ್ನೆ.
ಮೇಲ್ನೋಟಕ್ಕೆ ನೋಡಿದರೆ ಮಾಲ್ಗಳಿಗೆ ಶುಲ್ಕ ಸಂಗ್ರಹಿಸುವ ಯಾವುದೇ ಹಕ್ಕನ್ನು ಹೊಂದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.