ADVERTISEMENT
Monday, August 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

 ‘ಮೋದಿ ಸರ್ಕಾರಕ್ಕೆ’  9 ಪ್ರಶ್ನೆಗಳನ್ನ ಕೇಳಿದ ದೀದಿ – ಉತ್ತರ ಕೊಟ್ಟ ಕೇಂದ್ರ

Namratha Rao by Namratha Rao
June 2, 2021
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

Mamatha Banerjee

‘ಮೋದಿ ಸರ್ಕಾರಕ್ಕೆ’  9 ಪ್ರಶ್ನೆಗಳನ್ನ ಕೇಳಿದ ದೀದಿ – ಉತ್ತರ ಕೊಟ್ಟ ಕೇಂದ್ರ

Related posts

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

August 16, 2026
ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ!  ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ! ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

August 16, 2026

ಕೋಲ್ಕತ್ತಾ: ಈ  ಹಿಂದೆಯಿಂದಲೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರ ಎನ್ನುವುದಕ್ಕಿಂತ ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಡುವೆ ಸಂಘರ್ಷವಿದ್ದೇ ಇದೆ.. ಅದು ಪಶ್ಚಿಮಬಂಗಾಳ ವಿದಾನಸಭಾ ಚುನಾವಣೆಯ ನಂತರ ದೀದಿ ಮತ್ತೊಮ್ಮೆ ಮುಖ್ಯಮಂತ್ರಿಯಾದ ಮೇಲೆ ತಾರಕ್ಕೇರಿದೆ.. ಸದಾ ಕೇಂದ್ರದ ವಿರುದ್ಧ ಗುಡುಗುವ ಮಮತಾ ಬ್ಯಾನರ್ಜಿ ಇತ್ತೀಚೆಗೆ   ಕೇಂದ್ರದ ೆದುರು 9 ಪ್ರಶ್ನೆಗಳನ್ನ ಇಟ್ಟಿದ್ದರು.. ಇದಕ್ಕೆ ಈಗ ಸರ್ಕಾರ ಉತ್ತರ ಕೊಟ್ಟಿದೆ..

ಹೌದು ಪಶ್ಚಿಮಬಂಗಾಳದಲ್ಲಿ ತೀವ್ರವಾಗಿ ಹಾನಿಯುಂಟು ಮಾಡಿರುವ ಯಾಸ್ ಚಂಡಮಾರುತಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳ ನೇತೃತ್ವದಲ್ಲಿ ಸಭೆಗೆ ಮಮತಾ ಬ್ಯಾನರ್ಜಿ 30 ನಿಮಿಷ ತಡವಾಗಿ ಬಂದಿದ್ದರು. ಬಳಿಕ ಕೇಂದ್ರದ ಮುಂದೆ 9 ಪ್ರಶ್ನೆಗಳನ್ನ ಇಟ್ಟಿದ್ದರು.

ಪ್ರಶ್ನೆ ಉತ್ತರಗಳು

ಮಮತಾ ಬ್ಯಾನರ್ಜಿ ಪ್ರಶ್ನೆ 1 : ಪ್ರಧಾನಮಂತ್ರಿಗಳ ಕಾರ್ಯಕ್ರಮದ ಬಗ್ಗೆ ನನಗೆ ತಡವಾಗಿ ಮಾಹಿತಿ ಲಭ್ಯವಾಯ್ತು. ಹಾಗಾಗಿ ಪ್ರಧಾನಿಗಳ ಕಾರ್ಯಕ್ರಮಕ್ಕನುಗುಣವಾಗಿ ನನ್ನ ಶೆಡ್ಯೂಲ್ ಅವಧಿಯನ್ನ ಕಡಿತ ಮಾಡಿಕೊಂಡೆ ಎಂದಿದ್ದರು.
ಉತ್ತರ : ಪ್ರಧಾನಿಗಳ ಪ್ರವಾಸ ಚಂಡಮಾರುತದ ಹಾನಿಯ ಕುರಿತಾಗಿತ್ತು. ಸೈಕ್ಲೋನ್ ಕುರಿತ ಸಭೆಗಳ ಸಮಯ ಮೊದಲೇ ಹೇಗೆ ನಿಗದಿ ಮಾಡಲಾಗುತ್ತೆ. ಅಂಫಾನ್ ವೇಳೆಯೂ ಇದೇ ರೀತಿ ಟೈಮ್ ಲೈನ್ ಫಾಲೋ ಮಾಡಲಾಗಿತ್ತು. ಓಡಿಶಾ ಮತ್ತು ಬಂಗಾಲಕ್ಕೆ ಸಮಯದ ಮಾಹಿತಿ ನೀಡಲಾಗಿತ್ತು. ಓಡಿಶಾ ಅಚ್ಚುಕಟ್ಟಾಗಿ ತಯಾರಿ ನಡೆಸಿತ್ತು ಎಂದಿದೆ.

ಪ್ರಶ್ನೆ 2 : ನಾನು ಪ್ರಧಾನಿಗಳಿಗಾಗಿ ವೇಟ್ ಮಾಡಿದ್ದೇನೆ ಎಂದಿದ್ದಾರೆ.
ಉತ್ತರ: ಕುಲೈಕೂಂಡಾಗೆ ಪ್ರಧಾನಿಗಳು ಮಧ್ಯಾಹ್ನ 1.59 ನಿಮಿಷಕ್ಕೆ ಆಗಮಿಸಿದರು. ಆದ್ರೆ ಮಮತಾ ಬ್ಯಾನರ್ಜಿ ತಲುಪಿದ್ದು 2 ಗಂಟೆ 10 ನಿಮಿಷಕ್ಕೆ. ಇಲ್ಲಿ ಯಾರು, ಯಾರಿಗೆ ಕಾದಿದ್ದಾರೆ ಅನ್ನೋದು ತಿಳಿಯುತ್ತೆ. ಲ್ಯಾಂಡಿಂಗ್ ಬಳಿಕ 25 ನಿಮಿಷ ಬಳಿಕ ಪ್ರಧಾನಿಗಳನ್ನ ಭೇಟಿ, ಸಭೆಯಲ್ಲಿದ್ದು ಹೊರಟರು ಎಂದಿದೆ

ಪ್ರಶ್ನೆ 3 – ನನ್ನ ಕಾರ್ಯಕ್ರಮಗಳು ಮೊದಲೇ ನಿಗದಿಯಾಗಿದ್ದವು. ಪ್ರತಿಬಾರಿಗೂ ಮುಖ್ಯಮಂತ್ರಿಗಳೇ ಪ್ರಧಾನಿಗಳನ್ನ ಸ್ವಾಗತ ಮಾಡಬೇಕು ಅಂತೇನಿಲ್ಲ. ನಮಗೂ ನಮ್ಮದೇ ಕಾರ್ಯಕ್ರಮಗಳಿರುತ್ತವೆ.
ಉತ್ತರ: ಸಭೆಯಲ್ಲಿ ಭಾಗಿಯಾಗೋದರ ಬಗ್ಗೆ ಮಮತಾ ಬ್ಯಾನರ್ಜಿ ಹೇಳಿದ್ದರು. ಆದ್ರೆ ಸಭೆಯಲ್ಲಿ ವಿಪಕ್ಷ ನಾಯಕ ಭಾಗಿಯಾಗಿದ್ದಕ್ಕೆ ಹಿಂದಿರುಗಿದರು. ಕಾರ್ಯಕ್ರಮದಿಂದ ಹೊರ ಬರಲು ಇದೇ ಪ್ರಮುಖ ಕಾರಣ.

ಪ್ರಶ್ನೆ 4 : ಸಾಗರದಲ್ಲಿ ಪಿಎಂ ಹೆಲಿಕಾಪ್ಟರ್ ಲ್ಯಾಂಡ್ ಮುನ್ನ 20 ನಿಮಿಷ ಕಾಯಬೇಕಾಗಿ ಬಂತು
ಉತ್ತರ: ಪ್ರಧಾನಿಗಳು ಆಗಮನ ವೇಳೆ ಈ ರೀತಿಯ ಭದ್ರತಾ ವ್ಯವಸ್ಥೆ ಇರುತ್ತೆ. ಪಿಎಂ ಭದ್ರತೆ ಎಸ್‍ಪಿಜಿ ನಿಯಂತ್ರಣದಲ್ಲಿದ್ದು, ಅದು ಅವರ ವೃತ್ತಿ.

ಪ್ರಶ್ನೆ 5 : ಮುಖ್ಯ ಕಾರ್ಯದರ್ಶಿ ಕುರಿತ ಆದೇಶ ಆಶ್ಚರ್ಯವನ್ನುಂಟು ಮಾಡಿತು. ಇಲ್ಲಿ ರಾಜ್ಯ ಸರ್ಕಾರದ ಸಲಹೆ ಪಡೆಯಲಿಲ್ಲ. ಇದು ಸಂವಿಧಾನದ ಉಲ್ಲಂಘನೆ
ಉತ್ತರ: ಆದೇಶ ಸರಿಯಾಗಿ ಮತ್ತು ಕಾನೂನುಬದ್ಧವಾಗಿದೆ. ಚೀಫ್ ಸೆಕ್ರೆಟರಿ ಆಲ್ ಇಂಡಿಯಾ ಕೆಡರ್ ಆಫಿಸರ್. ಅವರು ತಮ್ಮ ಸಂವಿಧಾನಿಕ ಕರ್ತವ್ಯದ ಪಾಲನೆ ಮಾಡಿಲ್ಲ. ಪ್ರಧಾನಿಗಳಿಗೆ ಸಭೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಸಭೆಯಲ್ಲಿ ಬಂಗಾಳ ಸರ್ಕಾರದ ಯಾವುದೇ ಪ್ರತಿನಿಧಿಗಳು ಭಾಗಿಯಾಗಿರಲಿಲ್ಲ. ಚೀಫ್ ಸೆಕ್ರಟರಿ ಅವರ ನಿವೃತ್ತಿ ಮಮತಾ ಬ್ಯಾನರ್ಜಿ ಹಿಡಿತದಲ್ಲಿದ್ದರು ಎಂಬುವುದು ತಿಳಿಯುತ್ತೆ.

ಪ್ರಶ್ನೆ 6 : ಚೀಫ್ ಸೆಕ್ರೆಟರಿ ಅವರ ಸೇವಾವಧಿಯನ್ನ ವಿಸ್ತರಿಸಲಾಗಿತ್ತು. ಆದ್ರೆ ರಾಜತಾಂತ್ರಿಕ ಒಪ್ಪಿಗೆ ಪಡೆಯಲಾಗಿತ್ತು. ಈ ಅನುಮತಿ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಉತ್ತರ: ಕೇಂದ್ರ ರಾಜ್ಯ ಸರ್ಕಾರದ ಜೊತೆಯಲ್ಲಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಪ್ರಶ್ನೆ 7 : ಪಿಎಂ-ಸಿಎಂ ಸಭೆಗೆ ಓರ್ವ ಸ್ಥಳೀಯ ಶಾಸಕ ಭಾಗಿಯಾಗಿದ್ದರು. ಆದ್ರೆ ಕೇಂದ್ರ ಸಚಿವರು ಅಥವಾ ರಾಜ್ಯಪಾಲರ ಭಾಗಿಯಾಗಲು ಆಕ್ಷೇಪ ವ್ಯಕ್ತವಾಗಿತ್ತು.
ಉತ್ತರ: ಸಭೆಯಲ್ಲಿ ಭಾಗಿಯಾದ್ದು ವಿರೋಧ ಪಕ್ಷದ ನಾಯಕ. ಜೊತೆಗೆ ಅವರ ಕ್ಷೇತ್ರವೂ ಯಾಸ್ ನಿಂದ ಹಾನಿಗೆ ಒಳಗಾಗಿತ್ತು. ಈ ರೀತಿ ಹಲವು ಸಂದರ್ಭಗಳಲ್ಲಿ ನಡೆದಿದ್ದು, ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಅನೇಕ ಪಕ್ಷದ ನಾಯಕರು ಭಾಗಿಯಾಗಿದ್ದಾರೆ.

ಪ್ರಶ್ನೆ 8 : ಮೀಟಿಂಗ್ ಮೊದಲೇ ಚೀಫ್ ಸೆಕ್ರಟರಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಆದ್ರೆ ಆ ಕಡೆಯಿಂದ ನಮಗೆ ಯಾವುದೇ ಉತ್ತರ ಸಿಗಲಿಲ್ಲ.
ಉತ್ತರ: ವಿಪಕ್ಷ ನಾಯಕ ಭಾಗಿಯಾದ ಕಾರಣಕ್ಕೆ ಮಮತಾ ಬ್ಯಾನರ್ಜಿ ಸಭೆಯನ್ನ ಬಹಿಷ್ಕರಿಸಿದ್ರು. ಆದ್ರೆ ಕೇಂದ್ರ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಪರಿಶೀಲನೆ ಬಳಿಕ ಪ್ರಧಾನಿಗಳು ಮುಖ್ಯಮಂತ್ರಿಗಳನ್ನ ಭೇಟಿಯಾಗಬೇಕಿತ್ತು.

ಪ್ರಶ್ನೆ 9 : ಚೀಫ್ ಸೆಕ್ರಟರಿ ಜೊತೆಯಲ್ಲಿ ಸಭೆಗೆ ಬಂದೆ. ವರದಿಯನ್ನ ನೀಡಿ ಪ್ರಧಾನಿಗಳ ಬಳಿಯೇ ಅನುಮತಿ ಪಡೆದು ದೀಧಾನತ್ತ ಪ್ರಯಾಣ ಬೆಳೆಸಿದೆ.
ಉತ್ತರ: ಪ್ರಧಾನಮಂತ್ರಿಗಳು ಮಮತಾ ಬ್ಯಾನರ್ಜಿ ಅವರಿಗೆ ಸಭೆಯಿಂದ ಹೊರ ಬರಲು ಅನುಮತಿ ನೀಡಿರಲಿಲ್ಲ.

ಒಟ್ಟಾರೆ ದೀದಿ ಹಾಗೂ ಕೇಂದ್ರದ ನಡುವೆ ಸಂಘರ್ಷ ಮುಂದುವರೆದಿದ್ದು, ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ TMC ಗೆದ್ದ  ನಂತರ ಇದು  ತಾರಕಕ್ಕೇರಿದೆ. ಮಮತಾ ಬ್ಯಾನರ್ಜಿ ಕೇಂದ್ರ ಹಾಗೂ ಮೋದಿ ವಿರುದ್ಧ ಆಕ್ರೋಶ  ಹೊರಹಾಕುತ್ತಲೇ ಕೆಲ ಆರೋಪಗಳನ್ನೂ ,ಮಾಡುತ್ತಿದ್ದಾರೆ.

Mamatha Banerjee

Tags: BJPMamatha BanerjeeModiwestbengal cm
ShareTweetSendShare
Join us on:

Related Posts

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

by Shwetha
August 16, 2026
0

ಬಾಗಲಕೋಟೆ: ಆರ್‌ಎಸ್‌ಎಸ್ ಹಿಂದೆಂದೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಆಗುವುದಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸವಾಲಿನ ಹೇಳಿಕೆಗೆ ರಾಜ್ಯ ಕಾಂಗ್ರೆಸ್...

ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ!  ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ! ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

by Shwetha
August 16, 2026
0

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಸೈಲೆಂಟ್ ಆಗಿದ್ದಾರೆ, ಹೈಕಮಾಂಡ್ ನಡೆ ಹಾಗೂ ಮುಂಬರುವ ರಾಜಕೀಯ ಚಟುವಟಿಕೆಗಳ ಬಗ್ಗೆ ತೀವ್ರ ಆಲೋಚನೆಯಲ್ಲಿದ್ದಾರೆ...

ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡಿಸಬೇಡಿ: ವಲಸೆ ಹೋದ ಬಡವರು ಮಂಗಳ ಗ್ರಹಕ್ಕೇನೂ ಹೋಗಿಲ್ಲ – ಚುನಾವಣಾ ಆಯೋಗದ ಎಸ್‌ಐಆರ್ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ

ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡಿಸಬೇಡಿ: ವಲಸೆ ಹೋದ ಬಡವರು ಮಂಗಳ ಗ್ರಹಕ್ಕೇನೂ ಹೋಗಿಲ್ಲ – ಚುನಾವಣಾ ಆಯೋಗದ ಎಸ್‌ಐಆರ್ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ

by Shwetha
August 16, 2026
0

ಬೆಂಗಳೂರು: "ಮತ ಚಲಾಯಿಸುವುದು ಈ ದೇಶದ ಪ್ರಜೆಯ ಮೂಲಭೂತ ಹಕ್ಕು. ಆ ಹಕ್ಕನ್ನು ಚಲಾಯಿಸಲು ನಮ್ಮನ್ನು ಚುನಾವಣಾ ಆಯೋಗದ ಅಧಿಕಾರಿಗಳ ಮುಂದೆ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ"...

ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಸತತ 2ನೇ ಬಾರಿಯೂ ಗೈರಾದ ರಾಹುಲ್ ಗಾಂಧಿ, ಖರ್ಗೆ: ರಾಷ್ಟ್ರೀಯ ಹಬ್ಬದಲ್ಲೂ ತಾರಕಕ್ಕೇರಿದ ರಾಜಕೀಯ!

ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಸತತ 2ನೇ ಬಾರಿಯೂ ಗೈರಾದ ರಾಹುಲ್ ಗಾಂಧಿ, ಖರ್ಗೆ: ರಾಷ್ಟ್ರೀಯ ಹಬ್ಬದಲ್ಲೂ ತಾರಕಕ್ಕೇರಿದ ರಾಜಕೀಯ!

by Shwetha
August 16, 2026
0

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ...

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

by Shwetha
August 16, 2026
0

ಬೆಂಗಳೂರು: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ತೀವ್ರವಾಗಿ ಕುಸಿಯಲಾರಂಭಿಸಿದ್ದು, ಇಡೀ ದೇಶವೇ ಸಾಲು ಸಾಲು ಕಠಿಣ ಸಮಸ್ಯೆಗಳಿಂದ ತೊಂದರೆಗೆ ಸಿಲುಕಿದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram