ಪತ್ನಿ ತಲೆಯನ್ನೇ ಕತ್ತರಿಸಿದ ಪತಿ!
ಪತ್ನಿ ಅನೈಕಿಕ ಸಂಬಂಧ ಹಿನ್ನೆಲೆ
40 ವರ್ಷದ ಪುಟ್ಟಮ್ಮ ಮೃತ ಮಹಿಳೆ
ದೇವರಾಜು ಕೊಲೆಯ ಆರೋಪಿ
ಮೈಸೂರಿನ ಚಟ್ಟನಹಳ್ಳಿಯಲ್ಲಿ ಘಟನೆ
ಮೈಸೂರು : ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿ ಪತಿಯೇ ಪತ್ನಿಯ ಕತ್ತು ಸೀಳಿರುವ ಘಟನೆ ಮೈಸೂರಿನ ಚಟ್ಟನಹಳ್ಳಿಯಲ್ಲಿ ನಡೆದಿದೆ.
40 ವರ್ಷದ ಪುಟ್ಟಮ್ಮ ಕೊಲೆಯಾದ ಮಹಿಳೆಯಾಗಿದ್ದು, ದೇವರಾಜು ಕೊಲೆ ಆರೋಪಿಯಾಗಿದ್ದಾರೆ.
21 ವರ್ಷಗಳ ಹಿಂದೆ ಪುಟ್ಟಮ್ಮಳನ್ನು ದೇವರಾಜು ಎರಡನೇ ಮದುವೆ ಆಗಿದ್ದರು.

ದೇವರಾಜುಗೆ 20 ವರ್ಷದ ಮಗಳು ಇದ್ದರು. ಆದ್ರೂ ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ದೇವರಾಜು ನಿತ್ಯ ಗಲಾಟೆ ಮಾಡುತ್ತಿದ್ದರು.
ಇದು ಸೋಮವಾರ ವಿಕೋಪಕ್ಕೆ ಹೋಗಿದ್ದು ಮಗಳು ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ಪುಟ್ಟಮ್ಮ ತಲೆ ಕತ್ತರಿಸಿ ದೇವರಾಜು ನಾಪತ್ತೆಯಾಗಿದ್ದಾರೆ.
ಇನ್ನು ಈ ಸಂಬಂಧ ಮಗಳು ಪವಿತ್ರಾ ವರುಣ ಪೊಲೀಸ್ ಠಾಣೆಯಲ್ಲಿ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ.
ಸದ್ಯ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.








