ಮಹಾರಾಷ್ಟ್ರದಲ್ಲಿ ಕೊರೊನಾ ಲಸಿಕೆಯ 2ನೇ ಡೋಸ್ ಪಡೆದ ವ್ಯಕ್ತಿ ಸಾವು
ಮುಂಬೈ: ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮಗಳು ಆಗ್ತಿವೆ. ಈಗಾಗಲೇ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಆತಂಕದಿಂದ ಅನೇಕರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿರೋವಾಗಲೇ 45 ವರ್ಷದ ವ್ಯಕ್ತಿಯೊಬ್ಬರು ಲಸಿಕೆಯ 2ನೇ ಡೋಸ್ ಪಡೆದ ಬೆನ್ನಲ್ಲೇ ಮೃತಪಟ್ಟಿರುವ ಘಟನೆ ನಡೆದಿದ್ದು, ಮತ್ತಷ್ಟು ಆತಂಕ್ಕೆ ಕಾರಣವಾಗಿದೆ. ಹೌದು ಮಹಾರಾಷ್ಟ್ರದ ಭಿವಾಂಡಿಯದಲ್ಲಿ ಸುಖದೇವ್ ಕಿರ್ದತ್ ಎಂಬುವವರು ಕೊರೊನಾ ಲಸಿಕೆಯ 2ನೇ ಡೋಸ್ ಪಡೆದ 15 ನಿಮಿಷಗಳ ಬಳಿಕ ವೀಕ್ಷಣಾ ಕೊಠಡಿಗೆ ತೆರಳಿ ಮೃತಪಟ್ಟಿದ್ದಾರೆ.
ಎಂಜಿನಿಯರಿಂಗ್ ಫ್ರೆಶರ್ ಗಳಿಗೆ ಗುಡ್ ನ್ಯೂಸ್ : ಪೇಪಾಲ್ ಸೇರಲು ಸುವರ್ಣಾವಕಾಶ
ಮೃತ ವ್ಯಕ್ತಿ ಕಣ್ಣಿನ ತಜ್ಞರ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುಖದೇವ್ ಕಿರ್ದತ್ ಇತ್ತೀಚೆಗಷ್ಟೇ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ 2ನೇ ಡೋಸ್ ಪಡೆದಿದ್ದಾರೆ. ಲಸಿಕೆ ಪಡೆದ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಜನವರಿ 28ರಂದು ಕೊರೊನಾ ಲಸಿಕೆಯ ಮೊದಲ ಡೋಸ್ ಅನ್ನು ಪಡೆದುಕೊಂಡಿದ್ದರು. ಲಸಿಕೆ ನೀಡುವುದಕ್ಕೂ ಮುನ್ನ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಸುಖದೇವ್ ಕಿರ್ದತ್ ಅನೇಕ ವರ್ಷಗಳಿಂದ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿದ್ದರು. ಆದರೂ ಲಸಿಕೆ ಪಡೆದಿದ್ದರು ಎನ್ನಲಾಗಿದೆ. ಆದರೆ ಈ ಬಾರಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಸುಖದೇವ್ ಕಿರ್ದತ್ ರಕ್ತದೊತ್ತಡ ಹಾಗೂ ಉಸಿರಾಟ ಕ್ರಿಯೆ ಎಲ್ಲವೂ ಸಹಜ ಸ್ಥಿತಿಯಲ್ಲಿದ್ದರಿಂದ ಲಸಿಕೆ ನೀಡಲಾಗಿತ್ತು. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನ ರವಾನಿಸಲಾಗಿದ್ದು, ನಂತರವೇ ಸಾವಿಗೆ ಸ್ಪಷ್ಟ ಕಾರಣ ತಿಳಿದುಬರಲಿದೆ.